ಕೂಲಿ ಕಾರ್ಮಿಕರ ಸಾವಿಗೆ ಸರ್ಕಾರವೇ ಹೊಣೆ!
ಚಿತ್ರದುರ್ಗ,ಮೇ.
30: ಕೂಲಿ ಕಾರ್ಮಿಕರು ಇತ್ತೀಚೆಗೆ ಇದೇ ರೀತಿ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದರು. ಇಂದು ನಾಯಕನಹಟ್ಟಿ ಚಳ್ಳಕೆರೆ ಬಸ್ ದುರಂತದಲ್ಲಿ ಸತ್ತವರಲ್ಲಿ ಕೂಲಿ ಆಳುಗಳೇ ಹೆಚ್ಚು. ಬಡವರು ತುತ್ತು ಅನ್ನವನ್ನು ಅರಸಿ ದೂರದ ಊರಿಗೆ ಹೊರಟುವ ಪರಿಸ್ಥಿತಿ ತಂದಿಟ್ಟಿದ್ದು ರಾಜ್ಯ ಸರ್ಕಾರ ಸಾಧನೆ ಎನ್ನಬಹುದು. id="toptextpromo">ಕಳೆದ
ಎಂಟು ತಿಂಗಳಿನಿಂದ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡದೇ ಸರ್ಕಾರ ಉದಾಸೀನ ರೀತಿಯಲ್ಲಿ ವರ್ತಿಸುತ್ತಾ ಬಂದಿದೆ. ಹೀಗಾಗಿ ಉತ್ತರ ಕರ್ನಾಟಕದಿಂದ ಕೂಲಿ ಕಾರ್ಮಿಕರು ಉದ್ಯೋಗ ಅರಸಿ ಬೆಂಗಳೂರು, ದಾವಣಗೆರೆ, ಚಿಕ್ಕಮಗಳೂರು ಮುಂತಾದೆಡೆ ಗುಳೇ ಹೋಗುವುದು ಸಾಮಾನ್ಯವಾಗಿದೆ. id='are-slot-1' class='oiad oi-axt oiadv'> id='top-searched-articles'>ಹೀಗೆ
ಗುಳೇ ಹೋಗುವುದು ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಬೇಕಾದಎರ್ ಉದ್ಯೋಗ ಖಾತ್ರಿ ಯೋಜನೆ ಜಾರಿಕೊಂಡು, ಕೂಲಿ ಆಳುಗಳಿಗೆ ಅವರ ಸ್ಥಳದಲ್ಲೇ ಉದ್ಯೋಗ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಇಂತಹ ಪ್ರಕರಣಗಳು ಹೆಚ್ಚಿದರೆ ಆಶ್ಚರ್ಯವೇನಿಲ್ಲ. ಸುರಪುರದ ಶಾಸಕ ರಾಜೂಗೌಡ ಅವರು ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ ನಂತರ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳ್ಳದ ಕಾರಣ, ಒಂದು ರೀತಿ ಸಾವಿಗೆ ನಾವೂ ಸಹ ಕಾರಣ ಎಂದು ವಿಷಾದಿಸಿದರು.











Click it and Unblock the Notifications