ಧಾರವಾಡದಲ್ಲಿ ಹೊರನಾಡ ಕನ್ನಡಿಗರ ಸಭೆ

ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಅವರು ಕನ್ನಡಿಗರ ಸಭೆಯನ್ನು ಉದ್ಗಾಟಿಸಲಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕ.ವಿ.ವ.ಸಂಘದ ಹೊಸ ಅಂತರ್ಜಾಲ ತಾಣವನ್ನು ಉದ್ಗಾಟಿಸಲಿದ್ದಾರೆ. ವೀರಣ್ಣ ಮತ್ತಿಕಟ್ಟಿ, ವೀರಪ್ಪ ಮೊಯಿಲಿ, ಜಗದೀಶ್ ಶೆಟ್ಟರ್, ಬಿ.ಎಸ್.ಬೊಮ್ಮಾಯಿ, ಸಿ. ಎಮ್. ಉದಾಸಿ ಮುಂತಾದ ಮಂತ್ರಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮದ ಕೊನೆಯ ದಿನ ವಿಶ್ವೇಶ್ವರ ತೀರ್ಥಹಳ್ಳಿ ಮಠದ ಸ್ವಾಮೀಜಿ, ಮಾಜಿ ಮುಖ್ಯ ಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾನೂನು ಸಚಿವ ಸುರೇಶ್ ಕುಮಾರ್ ಮತ್ತು ಮಾಜಿ ಮಂತ್ರಿಗಳಾದ ಎಚ್.ಕೆ. ಪಾಟೀಲ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ಉದ್ದೇಶದ ಬಗ್ಗೆ ಪಾ.ಪು.ರವರು ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೊರರಾಜ್ಯಗಳಲ್ಲಿ ನೆಲೆಸಿ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ಪ್ರೋತ್ಸಾಹಿಸುತ್ತಿರುವ ಕನ್ನಡಿಗರನ್ನು ಒಟ್ಟು ಗೂಡಿಸುವುದು ಮತ್ತು ಆ ಮೂಲಕ ನಮ್ಮ ಹೊರನಾಡ ಕನ್ನಡಿಗ ಸಹೋದರ ಸಹೋದರಿಯರು ಮಾಡುತ್ತಿರುವ ಕೆಲಸಗಳಿಗೆ ಪ್ರೋತ್ಸಾಹ, ಸಹಕಾರ ಹಾಗೂ ಸಹಮತವನ್ನು ವ್ಯಕ್ತಪಡಿಸುವುದು. ಹಾಗೂ ಶಾಸ್ತ್ರೀಯ ಭಾಷೆಯಾಗಿರುವ ಕನ್ನಡ ಭಾಷೆಗೆ ಸಿಗಬೇಕಾದ ಹೆಚ್ಚಿನ ಮನ್ನಣೆಯನ್ನು ಪಡೆದುಕೊಳ್ಳಲು ಇರುವ ಅವಶ್ಯಕತೆಯನ್ನು ಅವರು ಒತ್ತಿ ಹೇಳಿದ್ದಾರೆ.











Click it and Unblock the Notifications