ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂ.ವಿ ಮಹೋದಯಃ ಸಂಸ್ಕೃತ ವಿದ್ಯಾಲಯಸ್ಯ ನೂತನ ಕುಲಪತಿಃ

By Shami
|
Google Oneindia Kannada News

Mallepuram Venkatesh
ಬೆಂಗಳೂರು, ಮೇ. 28: ರಾಜ್ಯದ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಪ್ರಥಮ ಕುಲಪತಿಗಳಾಗಿ ಸಾಹಿತಿ ಮಲ್ಲೇಪುರಂ ಜಿ ವೆಂಕಟೇಶ್ ಅವರನ್ನು ನೇಮಿಸಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ. ನೂತನ ವಿವಿಯ ವಿಶೇಷ ಅಧಿಕಾರಿಯಾಗಿದ್ದ ಮಲ್ಲೇಪುರಂ ಅವರು ಬುಧವಾರದಂದೇ ಅಧಿಕಾರ ಸ್ವೀಕಾರ ಮಾಡಿದ್ದಾರೆ. ನಾಲ್ಕು ವರ್ಷದ ಅವಧಿಗೆ ಇವರನ್ನು ಕುಲಪತಿಗಳಾಗಿ ಸರ್ಕಾರ ನೇಮಿಸಿದೆ.

ಬೆಂಗಳೂರಿನ ನೆಲಮಂಗಲದ ಹಿಂದುಳಿದ ಕುಟುಂಬದಿಂದ ಬಂದು ಸಾಹಿತ್ಯ ಲೋಕದಲ್ಲಿ ಬೆಳಗುತ್ತಿರುವ ವೆಂಕಟೇಶ್(59) ಅವರು ಸಂಸ್ಕೃತದಲ್ಲಿ ವಿದ್ವತ್, ಕನ್ನಡ ಹಾಗೂ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಹಲವು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿರುವ ಮಲ್ಲೇಪುರಂ ಅವರು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕೂಡ ಸೇವೆ ಸಲ್ಲಿಸಿದ್ದರು.

ಹೋಸಕೋಟೆ ಸಮೀಪದಲ್ಲಿ 10 ಎಕರೆ ಭೂಮಿಯನ್ನು ಸಂಸ್ಕೃತ ವಿವಿಗೆ ಎಂದು ಗುರುತಿಸಲಾಗಿದೆ. ಚಾಮರಜಪೇಟೆಯಲ್ಲಿರುವ ಚಾಮರಾಜೇಂದ್ರ ಸಂಸ್ಕೃತ ಕಾಲೇಜಿನಲ್ಲಿ ಸದ್ಯಕ್ಕೆ ವಿವಿಯ ಆಡಳಿತ ಕಚೇರಿ ಕಾರ್ಯ ನಿರ್ವಹಿಸಲಿದೆ.ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ವಿವಿಯ ಅಧಿಕಾರ ಅವಧಿ ಆರಂಭಗೊಳ್ಳಲಿದೆ. ಸುಮಾರು 14 ಕಾಲೇಜುಗಳು, 230 ಕ್ಕೂ ಅಧಿಕ ಪಾಠಶಾಲೆಗಳು ನೂತನ ವಿವಿಗೆ ಒಳಪಡಲಿದೆ ಎಂದು ವೆಂಕಟೇಶ್ ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X