ಆನೇಕಲ್ ನ ಎಚ್ ಡಿಎಫ್ ಸಿ ಎಟಿಎಂ ಮಾಯ
ಆನೇಕಲ್,
ಮೇ.30: ಎರಡು ಟಾಟಾ ಸೋಮೋಗಳಲ್ಲಿ ಬಂದ ಕಳ್ಳರ ಗುಂಪು, ಎಟಿಎಂ ಯಂತ್ರ ಒಡೆಯಲು ಯತ್ನಿಸಿ, ಕೊನೆಗೆ ಇಡೀ ಎಟಿಎಂ ಬಾಕ್ಸ್ ಅನ್ನು ಹೊತ್ತುಕೊಂಡು ಹೋದ ಘಟನೆ ಇಂದು ಮುಂಜಾನೆ ನಡೆದಿದೆ. id="toptextpromo">ಆನೇಕಲ್
ನಲ್ಲಿರುವ ಎಚ್ ಡಿಎಫ್ ಸಿ ಎಟಿಎಂ ಯಂತ್ರದ ಕಾವಲಿಗೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಒದಗಿಸಲಾಗಿತ್ತು. ಆದರೆ ತಡರಾತ್ರಿಯ ನಂತರ ಇಬ್ಬರು ನಿದ್ದೆ ಹೋಗಿದ್ದಾರೆ. ಬೆಳಗ್ಗೆ ಸುಮಾರು 2 ರಿಂದ 3 ಗಂಟೆಗೆ ಈ ಕೃತ್ಯ ನಡೆದಿದೆ. ಸುರಕ್ಷತಾ ಅಲಾರಾಂ ಸಂಪರ್ಕ ಕಡಿತಗೊಳಿಸಿ, ಹಾರೆಗಳಿಂದ ಮೀಟಿ ಎಟಿಎಂ ಯಂತ್ರವನ್ನು ಹೊತ್ತೊಯ್ದಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಈ
ಸಂಬಂಧ ಎಚ್ ಡಿಎಫ್ ಸಿ ಬ್ಯಾಂಕ್ ಮ್ಯಾನೇಜರ್ ಕಾರ್ತಿಕೇಯನ್ ದೂರು ನೀಡಿದ್ದಾರೆ. ಎಟಿಎಂ ಯಂತ್ರದಲ್ಲಿ ಸುಮಾರು 12 ರಿಂದ 16 ಲಕ್ಷ ರು ಹಣ ಇತ್ತು ಎನ್ನಲಾಗಿದ್ದು, ಬೆಂಗಳೂರು ಜಿಲ್ಲಾ ಎಸ್ ಪಿ ಡಾ. ಬಿಎ ಮಹೇಶ್, ಡಿವೈಎಸ್ಪಿ ಶಂಕರಪ್ಪ ಸ್ಥಳಕ್ಕೆ ಆಗಮಿಸಿ ಪರೀಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಬಂದು ತನಿಖೆ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಭದ್ರತಾ ಸಿಬ್ಬಂದಿಗಳ ವಿಚಾರಣೆ ನಡೆದಿದೆ ಎಂದು ಎಸ್ ಐ ಚೇತನ್ ಕುಮಾರ್ ಹೇಳಿದರು.











Click it and Unblock the Notifications