ಅಫ್ಜಲ್ ಗುರುಗೆ ನೇಣು : ಯೆಸ್ ಅಂತು ದಿಲ್ಲಿ
ನವದೆಹಲಿ,
ಮೇ. 20 : ಸಂಸತ್ ಮೇಲೆ ದಾಳಿ ನಡೆಸಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಅಫ್ಜಲ್ ಗುರು ಜೀವದಾನ ಕೋರಿ ಸಲ್ಲಿಸಿದ ಅರ್ಜಿಗೆ ಶೀಲಾ ದಿಕ್ಷೀತ್ ನೇತೃತ್ವದ ದಿಲ್ಲಿ ಸರಕಾರ ಕೊನೆಗೂ ಉತ್ತರಿಸಿದೆ. ಉಗ್ರ ಅಫ್ಜಲ್ ಗುರುಗೆ ಮರಣದಂಡನೆ ಶಿಕ್ಷೆ ಸರಿಯಾಗಿದೆ ಎಂದು ತನ್ನ ನಿಲುವನ್ನು ಸರಕಾರ ಸ್ಪಷ್ಟಪಡಿಸಿದೆ. ಇದರೊಂದಿಗೆ ಕೇಂದ್ರ ಮತ್ತು ದಿಲ್ಲಿ ಸರಕಾರದ ನಡುವೆ ಉಂಟಾಗಿದ್ದ ತಾಂತ್ರಿಕ ತೊಂದರೆ ಕೊನೆಗೊಂಡಂತಾಗಿದೆ. id="toptextpromo">2001ರಲ್ಲಿ
ನಡೆದ ಸಂಸತ್ ದಾಳಿಯಲ್ಲಿ ಪ್ರಮುಖ ಅಪರಾಧಿಯಾಗಿರುವ ಅಫ್ಜಲ್ ಗುರುಗೆ ಗಲ್ಲು ಶಿಕ್ಷೆ ನೀಡಬೇಕೆಂದು ಸುಪ್ರಿಂಕೋರ್ಟ್ ನೀಡಿರುವ ಆದೇಶವನ್ನು ದೆಹಲಿ ಸರಕಾರ ಸ್ವಾಗತಿಸಿದ್ದು, ಅಪರಾಧಿಯನ್ನು ಕ್ಯಾಪಿಟಲ್ ಫನೀಷ್ ಮೆಂಟ್ ಗೆ ಕೂಡಲೇ ಗುರಿಪಡಿಸಬೇಕು ಎಂದು ರಾಜ್ಯಪಾಲ ಲೆಫ್ಟಿನೆಂಟ್ ತೇಜಿಂದರ್ ಖನ್ನಾ ಅವರ ಮೂಲಕ ಕೇಂದ್ರ ಸರಕಾರಕ್ಕೆ ಉತ್ತರ ಬರೆದಿದೆ. id='are-slot-1' class='oiad oi-axt oiadv'> id='top-searched-articles'>ಸಂಸತ್
ದಾಳಿಯಲ್ಲಿ ಅಪರಾಧಿಯಾಗಿರುವ ಅಫ್ಜಲ್ ಗುರುಗೆ ಸುಪ್ರಿಂಕೋರ್ಟ್ ಮರಣದಂಡನೆ ಶಿಕ್ಷೆ ನೀಡಿದೆ. ಜೀವದಾನ ನೀಡಬೇಕೆಂದು ಕೋರಿ ಗುರು ರಾಷ್ಟ್ರಪತಿ ಬಳಿ ಅರ್ಜಿ ಸಲ್ಲಿಸಿದ್ದಾರೆ. ರಾಷ್ರಪತಿಗಳು ಅರ್ಜಿ ಪರಿಶೀಲನೆಗೆ ಕೇಂದ್ರ ಸರಕಾರಕ್ಕೆ ರವಾನಿಸಿದೆ. ಕೇಂದ್ರ ಸರಕಾರ ಸಂಬಂಧಿಸಿದ ರಾಜ್ಯ ಸರಕಾರಕ್ಕೆ ರವಾನಿಸಿತ್ತು. ಇದೀಗ ದಿಲ್ಲಿ ಸರಕಾರ ತನ್ನ ನಿಲುವನ್ನು ಪ್ರಕಟಿಸಿದೆ. ಆದರೆ, ಕೇಂದ್ರ ಮತ್ತು ರಾಷ್ಟ್ರಪತಿಗಳು ಯಾವ ನಿರ್ಧಾರ ಕೈಗೊಳ್ಳವರೆಂದು ಕಾಯ್ದು ನೋಡಬೇಕಿದೆ.











Click it and Unblock the Notifications