ರತನ್ ಟಾಟಾಗೆ ಗ್ಲೋಬಲ್ ಇಂಡಿಯನ್ ಪ್ರಶಸ್ತಿ
ಟೊರಾಂಟೊ,
ಮೇ.17: ದೇಶದ ಪ್ರಮುಖ ಕೈಗಾರಿಕೋದ್ಯಮಿ ಮತ್ತು ಟಾಟಾ ಸಮೂಹದ ಅದ್ಯಕ್ಷ ರತನ್ ಟಾಟಾ ಅವರು ಜಾಗತಿಕ ನಾಯಕತ್ವ ದೃಷ್ಟಿ ಕೋನ ಮತ್ತು ವೃತ್ತಿಪರ ಕೌಶಲ್ಯಕ್ಕಾಗಿ 2010ರ ಸಿಐಎಫ್, ಚಚ್ಲಾನಿ ಗ್ಲೋಬಲ್ ಇಂಡಿಯನ್ ಪ್ರಶಸ್ತಿ ಪಡೆದಿದ್ದಾರೆ. id="toptextpromo">ಕೆನಡಾ
ಇಂಡಿಯನ್ ಫೌಂಡೇಷನ್ ನೀಡುತ್ತಿರುವ ಈ ಪ್ರಶಸ್ತಿಯ ಮೊತ್ತ ಒಂದು ಕೋಟಿ ರೂಪಾಯಿಗಳಾಗಿದೆ.1962ರಲ್ಲಿ ದೇಶದ ಅತೀ ದೊಡ್ಡ ಕೈಗಾರಿಕಾ ಸಮೂಹ ಪ್ರವೇಶಿಸಿದ ಟಾಟಾ ಅವರು 1991ರಲ್ಲಿ ಕಂಪೆನಿಯ ಅದ್ಯಕ್ಷ ಪಟ್ಟವನ್ನು ಅಲಂಕರಿಸಿದರು. 1991ರಿಂದ ಈವರೆಗೆ ಕಂಪೆನಿಯ ಆದಾಯ 12ಪಟ್ಟು ಹೆಚ್ಚಿದೆ. id='are-slot-1' class='oiad oi-axt oiadv'> id='top-searched-articles'>ಇತ್ತೀಚೆಗೆ
ಟಾಟಾ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್, ಕೋರಸ್ ಉಕ್ಕು ಕಂಪೆನಿಯನ್ನು ಖರೀದಿಸಿತು. ದೇಶದ ನಾಗರಿಕರಿಗೆ ನೀಡಲಾಗುವ ಎರಡನೇ ಅತ್ಯುನ್ನತ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿಯನ್ನು ಸರ್ಕಾರ ನೀಡಿ ಗೌರವಿಸಿದೆ. ಟಾಟಾರ ಕನಸಿನ ಸನ್ಣ ಕಾರು ನ್ಯಾನೋದ ಉತ್ಪಾದನೆ ಕಳೆದ ವರ್ಷ ಆರಂಭವಾಗಿದ್ದು ಇದು ವಿಶ್ವದ ಗಮನ ಸೆಳೆದಿದೆ. ಕೆನಡಾ ಇಂಡಿಯಾ ಫೌಂಡೇಷನ್ ನೀಡುವ ಪ್ರಶಸ್ತಿ ಉತ್ತಮ ಸಾಧನೆಯ ಮೂಲಕ ವಿಶ್ವದ ಗಮನ ಸೆಳೆಯುವ ಭಾರತೀಯರಿಗೆ ನೀಡಲಾಗುವ ಪ್ರಶಸ್ತಿಯಾಗಿದೆ.











Click it and Unblock the Notifications