ಶ್ರೀರಾಮಸೇನೆ ನಿಷೇಧ ಇಲ್ಲ : ಯಡಿಯೂರಪ್ಪ
ಬೆಂಗಳೂರು,
ಮೇ. 17 : ದುಡ್ಡಿಗಾಗಿ ಕೋಮುಗಲಭೆ ಆರೋಪ ಎದುರಿಸುತ್ತಿರುವ ಶ್ರೀರಾಮಸೇನೆಯ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಬಂಧಿಸುವುದಾಗಲಿ ಅಥವಾ ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಹಿಂದೂತ್ವ ಪ್ರತಿಪಾದಿಸುತ್ತಿರುವ ಪ್ರಮೋದ್ ಮುತಾಲಿಕ್ ಅವರ ಮತ್ತೊಂದು ಮುಖ ಮಾಧ್ಯಮಗಳಲ್ಲಿ ಬಹಿರಂಗಕೊಳ್ಳುತ್ತಿರುವಂತೆ ಪ್ರತಿಪಕ್ಷಗಳು ಶ್ರೀರಾಮಸೇನೆಯನ್ನು ನಿಷೇಧಿಸಿ, ಮುತಾಲಿಕ್ ಬಂಧನಕ್ಕೆ ತೀವ್ರ ಒತ್ತಡ ಹೇರ ತೊಡಗಿವೆ. ಆದರೆ ಪ್ರಕರಣದಲ್ಲಿ ಮುತಾಲಿಕ್ ಅವರು ತಪ್ಪಿತಸ್ಥರೆಂದು ಸಾಬೀತಾದರೆ ಕಾನೂನು ರೀತಿಯಲ್ಲಿ ಕ್ರಮಕೈಗೊಳ್ಳಲಾಗುವುದು. ಇದರಲ್ಲಿ ಯಾರಿಗೂ ಸಂಶಯಬೇಡ ಎಂದರು. id='are-slot-1' class='oiad oi-axt oiadv'> id='top-searched-articles'>ಹೆಡ್‌ಲೈನ್ಸ್
ಟುಡೇ ಮತ್ತು ತೆಹಲ್ಕಾ ಪತ್ರಿಕೆ ನಡೆಸಿದ ಸ್ಟಿಂಗ್ ಆಪರೇಷನ್ ನಲ್ಲಿ ಪ್ರಮೋದ್ ಮುತಾಲಿಕ್ ಅವರು ಕೋಮುಗಲಭೆ ಎಬ್ಬಿಸಲು 60ಲಕ್ಷ ರೂಪಾಯಿ ಪಡೆದಿದ್ದಾರೆ ಎಂದು ಪ್ರಸಾರ ಮಾಡಲಾಗಿತ್ತು. ರಹಸ್ಯ ಕಾರ್ಯಾಚರಣೆಯ ವೀಡಿಯೋವನ್ನು ತರಿಸಿಕೊಂಡು ಪರೀಕ್ಷೆ ನಡೆಸಿ, ಸತ್ಯಾಸತ್ಯತೆ ಆಧಾರದ ಮೇಲೆ ಮುತಾಲಿಕ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಆಚಾರ್ಯ ಹೇಳಿಕೆ ನೀಡಿದ್ದರು.











Click it and Unblock the Notifications