ದೇವರೇ ಹಾಲಪ್ಪನನ್ನು ಬಿಡುಗಡೆಗೊಳಿಸು : ರೇಣುಕಾಚಾರ್ಯ
ಬೆಂಗಳೂರು,
ಮೇ. 16 : ಪೊಲೀಸರ ಬಂಧನದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಅವರಿಗೆ ಮುಕ್ತಿ ದೊರಕಿಸಿಕೊಡುವಂತೆ ಭಗವಂತನಲ್ಲಿ ಪ್ರಾರ್ಥಿಸುವುದಾಗಿ ಅಬಕಾರಿ ಸಚಿವ ರೇಣುಕಾಚಾರ್ಯ ಹೇಳಿದ್ದಾರೆ. ಹಾಲಪ್ಪ ಅವರ ರಾಜಕೀಯ ವಿರೋಧಿಗಳು ರೇಣುಕಾಚಾರ್ಯ ಹಾಗೂ ಬೇಳೂರು ಗೋಪಾಲಕೃಷ್ಣ ಪ್ರಮುಖರು ಎನ್ನುವುದು ತಿಳಿದಿರುವ ಸಂಗತಿ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲಪ್ಪ ನನಗೆ ಉತ್ತಮ ಸ್ನೇಹಿತರಾಗಿದ್ದರು. ಪ್ರಕರಣದ ಬಗ್ಗೆ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಸಿಐಡಿ ಪೊಲೀಸರು ಘಟನೆಯ ಸತ್ಯಾಸತ್ಯತೆ ಬಗ್ಗೆ ಶೀಘ್ರವೇ ಪತ್ತೆ ಹಚ್ಚಲಿದ್ದಾರೆ ಎಂದರು. ಈ ಪ್ರಕರಣದ ಬಗ್ಗೆ ಬಹಿರಂಗವಾಗಿ ಮಾತನಾಡುವುದು ತಪ್ಪಾಗುತ್ತದೆ. ಹಾಲಪ್ಪ ಅವರನ್ನು ಈ ಆರೋಪದಿಂದ ಬೇಗ ಮುಕ್ತಗೊಳಿಸು ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ರೇಣುಕಾಚಾರ್ಯ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಶೋಭಾ
ಕರಂದ್ಲಾಜೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವುದು ಬಿಡುವುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ. ನನ್ನದೇನಿದ್ದರೂ ಹೊನ್ನಾಳಿ ಕ್ಷೇತ್ರದ ಅಭಿವೃದ್ಧಿ ಮತ್ತು ಅಬಕಾರಿ ಖಾತೆಯನ್ನು ಸರಿಯಾಗಿ ನಿಭಾಯಿಸೋದು ಅಷ್ಟೆ ಎಂದು ಅವರು ಹೇಳಿದರು, ಶೋಭಾ ಕರಂದ್ಲಾಜೆ, ಸಿಎಂ ಕಾರ್ಯದರ್ಶಿ ಬಳಿಗಾರ ಅವರನ್ನು ಕೆಳಗಿಳಿಸುವಲ್ಲಿ ರೇಣುಕಾಚಾರ್ಯ ಭಿನ್ನಮತ ಚಟುವಟಿಕೆ ನಡೆಸಿದವರಲ್ಲಿ ಪ್ರಮುಖರಾಗಿದ್ದರು.











Click it and Unblock the Notifications