ಬಿಎಸ್ಎನ್ಎಲ್ : ಸ್ಧಿರ ದೂರವಾಣಿ ಕೈಪಿಡಿ ಬಿಡುಗಡೆ
ಬೆಂಗಳೂರು,
ಮೇ. 16 : ಕರ್ನಾಟಕದ ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಗ್ರಾಹಕರ ವಿವರ ಲಭ್ಯವಿರುವ ಸಿಡಿ ಬಿಡುಗಡೆಯಾಗಿದೆ. ಸಿಡಿಯಲ್ಲಿ ವ್ಯಕ್ತಿ ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ ತಿಳಿಯದಿದ್ದರೆ ಹೆಸರು ಮತ್ತು ವಿಳಾಸ ತಿಳಿಯುವ ಸೌಲಭ್ಯವನ್ನು ಇದರಲ್ಲಿ ಅಳವಡಿಸಲಾಗಿದೆ. id="toptextpromo">ಟಿಲಿಫೋನ್
ಹೌಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ಸಿಡಿ ಹಾಗೂ ಬೆಂಗಳೂರು ದೂರಸಂಪರ್ಕ ಜಿಲ್ಲೆಯ ಕೈಪಿಡಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಹಿರಿಯ ವಕೀಲ ಬಿ ವಿ ಆಚಾರ್ಯ, ಬಿಎಸ್ಎನ್ ಎಲ್ ಕರ್ನಾಟಕ ಮಹಾಪ್ರಬಂಧಕ ಪಿ ರಾಘವನ್, ಬೆಂಗಳೂರು ವೃತ್ತದ ಪ್ರಧಾನ ಮಹಾಪ್ರಬಂಧಕ ಸುಭೇಂದು ಘೋಷ್ ಹಾಜರಿದ್ದರು. id='are-slot-1' class='oiad oi-axt oiadv'> id='top-searched-articles'>ಸಿಡಿಯಲ್ಲಿ
ದೂರವಾಣಿ ವಿವರವನ್ನು ಸಾಫ್ಟ್ ವೇರ್ ಮೂಲಕ ಶೇಖರಿಸಿರುವುದರಿಂದ ಪೈರಸಿಗೆ ಅವಕಾಶವಿಲ್ಲ. 2010ಜನವರಿ 31ಕ್ಕೆ ಅನ್ವಯವಾಗುವಂತೆ ಇದನ್ನು ಪರಿಷ್ಕರಿಸಲಾಗಿದ್ದು, ಇನ್ನೊಂದು ವಾರದ ನಂತರ ದೂರವಾಣಿ ಕೈಪಿಡಿ ಅಥವಾ ಸಿಡಿ ಗ್ರಾಹಕರಿಗೆ ಲಭ್ಯವಾಗಲಿದೆ.











Click it and Unblock the Notifications