ಆಂಗ್ಲನಾಡಿನಲ್ಲಿ ಮೇಯರ್ ಆದ ಕನ್ನಡಿಗ ನೀರಜ್

ಇತ್ತೀಚೆಗೆ ನಡೆದ ಸ್ಥಳೀಯ ಆಡಳಿತಕ್ಕೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷದಿಂದ ಸ್ಪರ್ಧಿಸಿದ್ದ ನೀರಜ್ ಪಾಟೀಲ್ ಅವರು ಕೌನ್ಸಿಲರ್ ಆಗಿ ಆಯ್ಕೆಯಾಗಿದ್ದರು. ಮೇ 26ರಂದು ಲ್ಯಾಂಬೆತ್ ಟೌನ್ ಹಾಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ನೀರಜ್ ಪಾಟೀಲ್ ಅವರು ಲ್ಯಾಂಬೆತ್ ಮಹಾಪೌರರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಗುಲಬರ್ಗ ಜಿಲ್ಲೆಯ ಕಮಲಾಪುರದ ಡಾ. ನೀರಜ್ ಪಾಟೀಲ್ ಅವರು ಲೇಬರ್ ಪಕ್ಷದ 'ಜನಾಂಗೀಯ ಅಲ್ಪಸಂಖ್ಯಾತ ಕಾರ್ಯಪಡೆ'ಯ ರಾಷ್ಟ್ರೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
ಕನ್ನಡಿಗನೋರ್ವ ಆಂಗ್ಲ ನಾಡಿನಲ್ಲಿ ಮೇಯರ್ ಆಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿರುವ ಕನ್ನಡ ಬಳಗ ಯುಕೆ ತಜ್ಞ ವೈದ್ಯರಾಗಿರುವ ಡಾ.ನೀರಜ್ ಪಾಟೀಲ್ ಅವರನ್ನು ಅಭಿನಂದಿಸಿದೆ.












Click it and Unblock the Notifications