ಶೋಭಕ್ಕ, ಸೋಮಣ್ಣಗೆ ಮತ್ತೆ ಮಂತ್ರಿ ಪಟ್ಟ?

ಕೆ ಎಸ್ ಈಶ್ವರಪ್ಪ, ಹರತಾಳು ಹಾಲಪ್ಪ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಗಳಿಗೆ ಈಗಾಗಲೇ ಭಾರಿ ಲಾಭಿ ಆರಂಭವಾಗಿದೆ ಇದರ ಜೊತೆಗೆ ಸರಕಾರದ ವೇಗಕ್ಕೆ ಕೆಲಸ ಮಾಡದ ಸಚಿವರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ಧಪಡಿಸಿಕೊಂಡಿದ್ದಾರೆ. ನಾಲ್ಕುರಿಂದ ಐದು ಸಚಿವರನ್ನು ಕೈಬಿಡುವ ಚಿಂತನೆ ನಡೆಸಿದ್ದಾರೆ. ಆದರೆ, ಸಂಪುಟದಿಂದ ನಿರ್ಗಮಿಸುವ ಸಚಿವರು ಯಾರು ಎನ್ನುವುದು ಖಚಿತವಾಗಿಲ್ಲ. ಜೂನ್ 10 ರಿಂದ 20 ರೊಳಗೆ ಸಂಪುಟ ವಿಸ್ತರಣೆ ಆಗುಬಹುದು.
ರೆಡ್ಡಿಗಳ ಕೆಂಗಣ್ಣಿಗೆ ಗುರಿಯಾಗಿ ಸಚಿವ ಸ್ಥಾನ ಕಳೆದುಕೊಂಡ ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಉಪಚುನಾವಣೆಯಲ್ಲಿ ಸೋಲನ್ನು ಕಂಡಿದ್ದ ಹಾಗೂ ಇತ್ತೀಚೆಗೆ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ತನ್ನ ಸಾಮರ್ಥ್ಯ ತೋರಿಸಿದ್ದ ವಿ ಸೋಮಣ್ಣ ಅವರನ್ನು ಮತ್ತೆ ಸಂಪುಟಕ್ಕೆ ತೆಗೆದುಕೊಳ್ಳಲು ಯಡಿಯೂರಪ್ಪ ಉತ್ಸುಕರಾಗಿದ್ದಾರೆ. ಹಾಲಪ್ಪ ಮತ್ತು ಈಶ್ವರಪ್ಪ ಅವರ ಸ್ಥಾನಕ್ಕೆ ಈ ಇಬ್ಬರನ್ನು ತರಲು ಸಿಎಂ ಯೋಚಿಸಿದ್ದಾರೆ.
ಅಸಮರ್ಥ ಸಚಿವರು ಯಾರು ಎಂದು ಸ್ಪಷ್ಟವಾಗಿಲ್ಲವಾದರೂ ಮೂಲಗಳ ಪ್ರಕಾರ, ನರೇಂದ್ರ ಸ್ವಾಮಿ, ಗೂಳಿಹಟ್ಟಿ ಶೇಖರ್, ಅರವಿಂದ ಲಿಂಬಾವಳಿ ಅವರನ್ನು ಕೈಬಿಡುವ ಲಕ್ಷಣಗಳಿವೆ. ಅನೇಕಲ್ ನಾರಾಯಣಸ್ವಾಮಿ, ಸಿಟಿ ರವಿ, ಸಿದ್ದು ಸವದಿ, ಅಪ್ಪು ಪಟ್ಟಣಶೆಟ್ಟಿ, ಎಸ್ ಕೆ ಬೆಳ್ಳುಬ್ಬಿ ಹಾಗೂ ಮೈಸೂರಿನ ಎಚ್ ಎಸ್ ಶಂಕರಲಿಂಗೇಗೌಡ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಸಾಧ್ಯತೆಗಳು ಇವೆ. ಮುಂಗಾರು ಆರಂಭಕ್ಕೆ ಮುನ್ನ ಸಿಎಂ ಹುತ್ತಕ್ಕೆ ಕೈಹಾಕುತ್ತಿದ್ದಾರೆ. ಅವರಿಗೆ ಯಶ್ ಸಿಗಲಿ.












Click it and Unblock the Notifications