ಪೊಲೀಸರಿಗೆ ಮತ್ತೇರಿದ ಮಹಿಳೆ ಬೈಗುಳ
ಬೆಂಗಳೂರು,
ಮೇ.10: ನಗರದ ಟ್ರಾಫಿಕ್ ಪೋಲಿಸರು ಇತ್ತೀಚೆಗೆ ಶ್ರೀಮಂತ ಹಾಗೂ ವಿದೇಶಿ ಮಹಿಳೆಯರಿಂದ ಬೈಗುಳಗಳು ಹೆಚ್ಚಿವೆ. ತಪ್ಪು ತಿಳಿಯ ಬೇಡಿ. ನಮ್ಮ ಪೊಲೀಸರದು ಇದರಲ್ಲಿ ಏನು ತಪ್ಪಿಲ್ಲ. ಎಲ್ಲಾ ಮದಿರೆಯ ಪ್ರಭಾವ. ಎಂಜಿ ರಸ್ತೆ, ಕಸ್ತ್ತೂರ್ ಬಾ ರಸ್ತೆ, ಶಿವಾಜಿನಗರ ಆಸುಪಾಸಿನ ಸ್ಥಳಗಳಿಗೆ ಅಪರವೇಳೆಯಲ್ಲಿ ಮದ್ಯದ ನಶೆ ಏರಿಸಿಕೊಂಡು ಅಡ್ಡಾ ದಿಡ್ಡಿ ಕಾರು ಓಡಿಸಿ, ಜಾಲಿ ರೈಡ್ ಮಾಡುವ ಯುವತಿ, ಯುವಕರನ್ನು ತಡೆಯುವ ಪೊಲೀಸರಿಗೆ ಅವಾಚ್ಯ ಶಬ್ದಗಳ ಅರ್ಚನೆ ತಪ್ಪಿದ್ದಲ್ಲ. id="toptextpromo">ಇತ್ತೀಚೆಗೆ
ಇರಾನಿ ಯುವತಿಯೊಬ್ಬಳು ಈ ರೀತಿಯ ಪ್ರಕರಣದಲ್ಲಿ ಸಿಕ್ಕಿ ಹಾಕಿಕೊಂಡು, ಪೊಲೀಸರಿಗೆ, ಮಾಧ್ಯಮದವರಿಗೆ ಗೂಸಾ ನೀಡಿದ್ದರು.ಅದೇ ರೀತಿ ಘಟನೆ ನಗರದಲ್ಲಿ ಮತ್ತೆ ಸಂಭವಿಸಿದೆ.ಶಿವಾಜಿನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೈನಾ ಗುಪ್ತ (34) ಎಂಬ ಮದ್ಯಪಾನಿ ಮಹಿಳೆ, ಪೊಲೀಸರಿಗೆ ಸಿಕ್ಕ ಬಿದ್ದ ತಕ್ಷಣ ಅವರ ಮೇಲೆ ಹರಿಹಾಯ್ದು, ಅಸಭ್ಯ ಭಾಷೆ ಬಳಸಿದ್ದಾಳೆ. ಈ ಸಂದರ್ಭದಲ್ಲಿ ಆಕೆಯ ಜೊತೆ ಕಾರಿನಲ್ಲಿ ಒಬ್ಬ ಯುವಕ ಇದ್ದ ಆದರೆ ಆತನ ಗುರುತು ಪತ್ತೆಯಾಗಿಲ್ಲ ಎಂದು ಎಸ್ ಐ ಗಿರೀಶ್ ರಾವ್ ಹೇಳಿದರು. id='are-slot-1' class='oiad oi-axt oiadv'> id='top-searched-articles'>ಭಾರತದ
ಪಬ್ ರಾಜಧಾನಿ ಎಂದು ಕುಖ್ಯಾತಗೊಂಡಿರುವ ಬೆಂಗಳೂರು ನಗರದಲ್ಲಿ ಈ ರೀತಿ ಪ್ರಕರಣಗಳು ಹೆಚ್ಚುತ್ತಿದ್ದು, ಅದರಲ್ಲೂ ಮಹಿಳೆಯರು ಸಿಕ್ಕಿ ಬೀಳುತ್ತಿರುವುದು ವಿಶೇಷ. ಆದರೆ, ಅರೆ ಪ್ರಜ್ಞಾವಸ್ಥೆಯಲ್ಲಿರುವ ಮದ್ಯಪಾನಿ ಯುವತಿಯರನ್ನು ಸಂಭಾಳಿಸುವುದು ತುಂಬಾ ಕಷ್ಟ ಎನ್ನುವ ಎಸ್ಐ ಗಿರೀಶ್ ರಾವ್ ಅವರು, ಇರಾನಿ ಯುವತಿ ಪ್ರಕರಣದನಂತರ ಮಾಧ್ಯಮದವರಿಗೂ ಪಾನಮತ್ತ ಮಹಿಳೆಯರು ಎಂದರೆ ನಾಲ್ಕು ಅಡಿ ದೂರವೇ ಉಳಿಯ ತೊಡಗಿದ್ದಾರೆ. ಇದಕ್ಕೆ ಸದ್ಯಕ್ಕಂತೂ ಪರಿಹಾರ ಕಾಣುತ್ತಿಲ್ಲ, ಕಾನೂನು ಪ್ರಕಾರ ನಮ್ಮ ಕರ್ತವ್ಯ ನಾವು ನಿರ್ವಹಿಸುತ್ತಿದ್ದೇವೆ ಎಂದು ಶಿವಾಜಿನಗರ ಪೊಲೀಸ್ ಠಾಣೆ (ಸಂಚಾರಿ ವಿಭಾಗ) ಸಬ್ ಇನ್ಸ್ ಪೆಕ್ಟರ್ ಗಿರೀಶ್ ಹೇಳಿದರು.











Click it and Unblock the Notifications