ಕನ್ನಡದಲ್ಲಿ 125ಕ್ಕೆ 125 ಪಡೆದ ಕ್ಷಮಾ
ಬೆಂಗಳೂರು,
ಮೇ.7: ಇತ್ತೀಚೆಗೆ ಪ್ರಕಟಗೊಂಡ ಎಸ್ ಎಸ್ ಎಲ್ ಸಿ 2010 ಪರೀಕ್ಷಾ ಫಲಿತಾಂಶದಲ್ಲಿ ನಗರ ವಿದ್ಯಾರ್ಥಿನಿಯೊಬ್ಬರು ಕನ್ನಡ ಭಾಷೆ ವಿಷಯದಲ್ಲಿ ಪೂರ್ಣ ಅಂಕ ಗಳಿಸಿದ ಸಾಧನೆ ಮೆರೆದಿದ್ದಾರೆ. id="toptextpromo">ರಾಜಾಜಿನಗರದ
ಎಸ್ ಜೆ ಆರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕ್ಷಮಾ ಎಂ. ಈ ಸಾಧನೆ ಮೆರೆದ ಕನ್ನಡತಿ.ಕನ್ನಡ ಭಾಷೆ ಅಲ್ಲದೆ ದ್ವಿತೀಯ ಭಾಷೆ ಇಂಗ್ಲೀ ಷ್ , ತೃತೀಯ ಭಾಷೆ ಹಿಂದಿಯಲ್ಲಿ ತಲಾ 98 ಅಂಕಗಳಿಸಿದ್ದಾರೆ. ಭಾಷಾ ವಿಷಯದಲ್ಲಷ್ಟೇ ಅಲ್ಲದೆ ಗಣಿತದಲ್ಲಿ 98, ವಿಜ್ಞಾನದಲ್ಲಿ 95 ಹಾಗೂ ಸಮಾಜ ವಿಜ್ಞಾನದಲ್ಲಿ 98 ಅಂಕ ಪಡೆದಿದ್ದಾರೆ. ಒಟ್ಟು 625ಕ್ಕೆ 612 ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ. ಕ್ಷಮಾ ಅವರ ನೋಂದಣಿ ಸಂಖ್ಯೆ 20100836064; ಪೂರ್ಣ ಅಂಕಪಟ್ಟಿ ವೀಕ್ಷಿಸಲು ಕ್ಲಿಕ್
ಮಾಡಿ
id='are-slot-1'
class='oiad
oi-axt
oiadv'>
id='top-searched-articles'>
ಪ್ರತಿನಿತ್ಯ
ಅಭ್ಯಾಸ, ಶಿಕ್ಷಕರ, ಪೋಷಕರ ಸಲಹೆಗಳು, ಕೊಂಚ ಪರಿಶ್ರಮ ಇಷ್ಟು ಸಾಕು ನೂರಕ್ಕೆ ನೂರು ಅಂಕಗಳಿಸಲು ಎನ್ನುವ ಕ್ಷಮಾ, ವ್ಯಾಕರಣ ಬದ್ಧ ಹಾಗೂ ಅಂದವಾದ ಬರವಣಿಗೆ ಅಂಕಗಳಿಕೆಗೆ ಪೂರಕ ಎಂದು ಹೇಳುವುದನ್ನು ಮರೆಯಲಿಲ್ಲ. ಕನ್ನಡದಲ್ಲಿ ನಗರದ ವಿದ್ಯಾರ್ಥಿನಿ ಮಾಡಿದ ಸಾಧನೆಗೆ ದಟ್ಸ್ ಕನ್ನಡ ಅಭಿನಂದನೆ ಸಲ್ಲಿಸುತ್ತದೆ.











Click it and Unblock the Notifications