ದ್ವಿತೀಯ ಪತ್ನಿಗೆ ಜೀವನಾಂಶ ಇಲ್ಲ : ಬಾಂಬೆ ಹೈಕೋರ್ಟ್
ಮುಂಬೈ,
ಮೇ. 6 : ವಿವಾಹಿತ ಪುರುಷನನ್ನು ಮದುವೆಯಾಗುವ ಹಿಂದೂ ಮಹಿಳೆ(ಎರಡನೇ ಪತ್ನಿ) ಜೀವನಾಂಶವನ್ನು ಕೇಳುವಂತಿಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. id="toptextpromo">ದ್ವಿತೀಯ
ಪತ್ನಿ ಹಿಂದೂ ವಿವಾಹ ಕಾಯಿದೆ ಅಥವಾ ಹಿಂದೂ ದತ್ತು ಸ್ವೀಕಾರ ಮತ್ತು ನಿರ್ವಹಣಾ ಕಾಯಿದೆ ಪ್ರಕಾರ ಜೀವನಾಂಶ ಕೇಳುವಂತಿಲ್ಲ ಎಂದು ನ್ಯಾಯಮೂರ್ತಿ ಎ ಪಿ ದೇಶಪಾಂಡೆ ಮತ್ತು ಆರ್ ಪಿ ಸೊಂಡುಬಲ್ದೋಟಾ ಅವರಿದ್ದ ಪೀಠ ಆದೇಶ ನೀಡಿದೆ. ವಿವಾಹ ಕಾಯಿದಯ ಪ್ರಕಾರ ಮೊದಲ ಪತ್ನಿ ಬದುಕಿರುವಾಗ 2ನೇ ಪತ್ನಿ ಮದುವೆಯಾಗುವುದು ಅಸಿಂಧು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. id='are-slot-1' class='oiad oi-axt oiadv'> id='top-searched-articles'>ರೇಖಾ
ಎಂಬ ಮಹಿಳೆ ಜೀವನಾಂಶ ಕೋರಿ ಸಲ್ಲಿಸಿದ್ದ ಅರ್ಜಿ ಕೌಟುಂಬಿಕ ನ್ಯಾಯಾಲಯದಲ್ಲಿ ವಜಾಗೊಂಡಿತ್ತು. ಗಂಡನಿಗೆ ಮೊದಲ ಪತ್ನಿ ಇರುವ ಹಿನ್ನೆಲೆಯಲ್ಲಿ ರೇಖಾ ಹಿಂದೂ ದತ್ತು ಸ್ವೀಕಾರ ಮತ್ತು ನಿರ್ವಹಣಾ ಕಾಯಿದೆಯಡಿಯಲ್ಲಿ ಜೀವನಾಂಶ ಕೋರಿದ್ದರು. ರೇಖಾಗೆ ಹಿಂದೂ ವಿವಾಹ ಕಾಯಿದೆ ಪ್ರಕಾರ ಹೆಂಡತಿಯ ಸ್ಥಾನಮಾನ ಸಿಗುವುದಿಲ್ಲ ಹಾಗೂ ಹಿಂದೂ ದತ್ತು ಮತ್ತು ನಿರ್ವಹಣಾ ಕಾಯಿದೆ ಅಡಿಯಲ್ಲಿ ಜೀವನಾಂಶಕ್ಕೆ ಅರ್ಹವಾಗುವುದಿಲ್ಲ ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.











Click it and Unblock the Notifications