ಪೊಲೀಸರೆ ಇದು ನ್ಯಾಯವೇ? ರಾಜದೀಪ್

ಮಾಧ್ಯಮದ ಪ್ರತಿನಿಧಿಯು ಸುದ್ದಿಯ ಮೂಲವನ್ನು ಹಾಗೂ ಸುದ್ದಿಗೆ ಅಗತ್ಯವಾದ ಮಾಹಿತಿಯನ್ನು ಒದಗಿಸಿದವರ ವಿವರಗಳನ್ನು ಬಹಿರಂಗಪಡಿಸಬಾರದು ಎಂಬುದು ವೃತ್ತಿ ಸಂಹಿತೆಯಾಗಿದೆ. ಹೀಗಿದ್ದಾಗೂ ಮಾವೋವಾದಿ ಮುಖಂಡರ ಸಂದರ್ಶನ ಮಾಡಿದ್ದ ಪ್ರಜಾವಾಣಿ ಪತ್ರಿಕೆ ವರದಿಗಾರ ರಾಹುಲ್ ಬೆಳಗಲಿ ಅವರಿಗೆ ಶಿವಮೂಗ್ಗ ಪೊಲೀಸರು ಸುದ್ದಿಯ ಮೂಲವನ್ನು ಬಹಿರಂಗಪಡಿಸುವಂತೆ ಒತ್ತಡ ಹೇರಿದ್ದಾರೆ. ಸುದ್ದಿಯ ಮೂಲವನ್ನು ತಮಗೆ ತಿಳಿಸದಿದ್ದರೆ ಕಾನೂನು ಬಾಹಿರ ತಡೆ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಕಿಡಿಕಾರಿದರು.
ಬೆಳಗಲಿ ಅವರು ಸುದ್ದಿಯ ಮೂಲವನ್ನು ಬಹಿರಂಗಪಡಿಸಲು ನಿರಾಕರಿಸಿದಾಗ ಶಿವಮೂಗ್ಗ ಪೊಲೀಸರು ಪ್ರಜಾವಾಣಿ ಪತ್ರಿಕೆ ಸಹಸಂಪಾದಕ ಪದ್ನರಾಜ ದಂಡಾವತಿ ಅವರಿಗೆ ನೋಟಿಸ್ ಜಾರಿ ಕ್ರಮ ಕೈಗೊಳ್ಳುವ ಬೆದರಿಕೆ ಹಾಕಿದ್ದಾರೆ. ಇಬ್ಬರಿಗೂ ಒಂದು ವಾರದಲ್ಲಿ ತಮ್ಮ ಮುಂದೆ ಹಾಜರಾಗಬೇಕು ಎಂದು ಶಿವಮೂಗ್ಗ ಪೊಲೀಸರು ತಾಕೀತು ಮಾಡಿರುವ ಎಲ್ಲಿಯ ನ್ಯಾಯ ಎಂದು ಎಡಿಟರ್ ಗಿಲ್ಡ್ ಆಫ್ ಇಂಡಿಯಾ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ರಾಜ್ ದೀಪ್ ಸರ್ ದೇಸಾಯಿ ಪ್ರಶ್ನಿಸಿದ್ದಾರೆ.
ಶಿವಮೂಗ್ಗ ಪೊಲೀಸರು ದೌರ್ಜನ್ಯವನ್ನು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಸ್ವಾತಂತ್ರ್ಯದ ಮೇಲೆ ಹಲ್ಲೆ ನಡೆಸುತ್ತಿರುವ ಶಿವಮೂಗ್ಗ ಡಿವೈಎಸ್ಪಿ ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು ಹಾಗೂ ಪತ್ರಕರ್ತರ ಬಂಧನಕ್ಕೆ ಹೊರಡಿಸಿರುವ ವಾರೆಂಟನ್ನು, ಕಾನೂನುಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿದ್ದೀರಿ ಎನ್ನುವ ಅಪಾದನೆಯನ್ನೂ ತಕ್ಷಣವೇ ಹಿಂಗೆತೆದುಕೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.












Click it and Unblock the Notifications