ಹೊಗೇನಕಲ್ ಯೋಜನೆ ಸ್ಥಗಿತಕ್ಕೆ ಆಗ್ರಹ
ನವದೆಹಲಿ,
ಮೇ. 5 : ವಿವಾದಿತ ಹೊಗೇನಕಲ್ ಕುಡಿಯುವ ನೀರಿನ ಯೋಜನೆಯನ್ನು ತಕ್ಷಣಕ್ಕೆ ನಿಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ಸಂಸದರ ನಿಯೋಗ ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಬೇಟಿ ಮಾತುಕತೆ ನಡೆಸಿತು. id="toptextpromo">ಹೊಗೇನಕಲ್
ಯೋಜನೆಯನ್ನು ತಮಿಳುನಾಡು ಸರಕಾರ ಆರಂಭಿಸಿದ್ದರೂ ರಾಜ್ಯದ ಸಂಸದರು ರಾಜ್ಯದ ಹಿತಾಸಕ್ತಿ ಮರೆತಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಇತ್ತೀಚೆಗೆ ನಡೆಸಿದ ಪ್ರತಿಭಟನೆಯಿಂದ ಎಚ್ಚತ್ತುಕೊಂಡು ಸಂಸದರು ಇಂದು ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರನ್ನು ಬೇಟಿ ಹೊಗೇನಕಲ್ ಯೋಜನೆಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲ್ಲದೇ,
ಹೊಗೇನಕಲ್ ವಿವಾದ ಸಾಕಷ್ಟು ದಿನಗಳಿಂದಲೂ ವಿವಾದವಾಗಿಯೇ ಉಳಿದಿದೆ. ಹೀಗಾಗಿ ಕೇಂದ್ರದ ಮಧ್ಯಸ್ಥಿಕೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಸಮ್ಮುಖದಲ್ಲಿ ವಿವಾದಕ್ಕೆ ತೆರೆ ಎಳೆಯಬೇಕಾಗಿದೆ. ಮಾತುಕತೆ ನಡೆಯದೆ ಹೊಗೇನಕಲ್ ಯೋಜನೆಯ ಕಾಮಗಾರಿಯನ್ನು ತಡೆಹಿಡಿಯಬೇಕು. ಈ ಕೂಡಲೇ ತಮಿಳುನಾಡು ಸರಕಾರಕ್ಕೆ ಆದೇಶ ನೀಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ. ನಿಯೋಗದಲ್ಲಿ ಅನಂತಕುಮಾರ್, ಜನಾರ್ದನಸ್ವಾಮಿ ಸೇರಿದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಸಂಸದರು ಪ್ರಧಾನಮಂತ್ರಿಯನ್ನು ಬೇಟಿ ಮಾಡಿದ್ದರು.











Click it and Unblock the Notifications