ಸಿಐಡಿ ಪೊಲೀಸರ ಕೈಗೆ ಹಾಲಪ್ಪನ ಕಾಮಕಾಂಡ
ಬೆಂಗಳೂರು,
ಮೇ. 3 : ಹಾಲಪ್ಪ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದಾರೆ. ಆದರೆ, ಹಾಲಪ್ಪ ಅವರನ್ನು ಏಕೆ ಬಂಧಿಸಬೇಕು ? ರಾಸಲೀಲೆಯಲ್ಲಿ ಸಿಕ್ಕಿಬಿದ್ದಿದ್ದ ಆಂಧ್ರಪ್ರದೇಶ ರಾಜ್ಯಪಾಲರನ್ನೇಕೆ ಜೈಲಿಗೆ ಹಾಕಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಪ್ರಶ್ನಿಸಿದ್ದಾರೆ. id="toptextpromo">ರಾಜ್ಯಾದ್ಯಂತ
ವ್ಯಾಪಕ ಖಂಡನೆಗೆ ಆಕ್ರೋಶಕ್ಕೆ ಗುರಿಯಾಗಿರುವ ಹರತಾಳ್ ಹಾಲಪ್ಪ ಅತ್ಯಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಕ್ರಿಯೆ ನೀಡಿರುವ ಅವರು, ಪ್ರಕರಣದ ಸತ್ಯಾಸತ್ಯತೆಯನ್ನು ಹೊರತರಲು ಈ ಕೂಡಲೇ ಸಿಐಡಿ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಆರೋಪ ಬಂದ ಹಿನ್ನೆಲೆಯಲ್ಲಿ ಸಚಿವರೊಬ್ಬರು ದಿಢೀರ್ ಅಂತ ರಾಜೀನಾಮೆ ನೀಡಿರುವುದು ಇದೇ ಪ್ರಥಮ. ಹಾಲಪ್ಪ ಈ ಪ್ರಕರಣದಲ್ಲಿ ನಿರಪರಾಧಿಯಾಗಿ ಹೊರಬರಲಿದ್ದಾರೆ ಎಂದು ಅವರು ಸಮರ್ಥಿಸಿಕೊಂಡರು. id='are-slot-1' class='oiad oi-axt oiadv'> id='top-searched-articles'>ಹಾಲಪ್ಪ
ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿರುವ ಕಾಂಗ್ರೆಸ್ ಗೆ ತಿರುಗೇಟು ನೀಡಿದ ಈಶ್ವರಪ್ಪ, ಹಾಲಪ್ಪ ಅವರನ್ನು ಏಕೆ ಬಂಧಿಸಬೇಕು. ಆಂಧ್ರಪ್ರದೇಶದ ರಾಜ್ಯಪಾಲ ಎನ್ ಡಿ ತಿವಾರಿ ಅವರನ್ನು ಈ ಕಾಂಗ್ರೆಸ್ ಪಕ್ಷ ಬಂಧಿಸಿತ್ತೆ. ಆರೋಪ ಬಂದಿದೆ. ತನಿಖೆ ನಡೆಯಲಿ ನಂತರ ಮುಂದಿನ ಕ್ರಮಗಳ ಬಗ್ಗೆ ಯೋಚಿಸೋಣ ಎಂದು ಅವರು ಸ್ಪಷ್ಟಪಡಿಸಿದರು.











Click it and Unblock the Notifications