ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಕಿರಣ ಸೋರಿಕೆ: ದೆಹಲಿ ವಿವಿ ಕೈವಾಡ?

By Mahesh
|
Google Oneindia Kannada News

Radioactive materials
ನವದೆಹಲಿ, ಏ.29:ದೆಹಲಿ ವಿವಿಯಲ್ಲಿ ಉಂಟಾಗಿದ್ದ ವಿಕಿರಣ ಸೋರಿಕೆಯ ಮೂಲ ಪತ್ತೆ ಹಚ್ಚುವಲ್ಲಿ ರಾಜಧಾನಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ಹಿಂದೆ ದಿಲ್ಲಿ ವಿಶ್ವವಿದ್ಯಾನಿಲಯದ ರಾಸಯನಶಾಸ್ತ್ರ ವಿಭಾಗದ ಕೈವಾಡ ಬಯಲಾಗಿದೆ.

ಗಾಮಾ ವಿಕಿರಣ ಹೊರ ಸೂಸುತ್ತಿದ್ದ ಕೋಬಾಲ್ಟ್ - 60 ಉಪಕರಣವನ್ನು 1968 ರಲ್ಲೇ ಕೆನಡಾದಿಂದ ಖರೀದಿಸಲಾಗಿತ್ತು. ಆದರೆ 1985 ರ ತನಕ ಈ ಯಂತ್ರವನ್ನು ಬಳಕೆಮಾಡಿರಲಿಲ್ಲ. ನಂತರ ಗುಜರಿ ವ್ಯಾಪಾರಿಯೊಬ್ಬ ಇದೇ ಫೆಬ್ರವರಿ ತಿಂಗಳಲ್ಲಿ ಹರಾಜು ಮೂಲಕ ಕೋಬಾಲ್ಟ್ -60 ಉಪಕರಣವನ್ನು ಖರೀದಿಸಿದ್ದರು.ಇದಾದ ನಂತರ ಇತ್ತೀಚಿಗಷ್ಟೇ ಉಪಕರಣದಲ್ಲಿನ ವಿಕಿರಣ ಸೋರಿಕೆಯಾಗಿ ಓರ್ವ ಮೃತಪಟ್ಟಿದ್ದ. ಇನ್ನೂ ಹಲವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

ವಿಡಿಯೋ: ವಿಕಿರಣ ಸೋರಿಕೆ ಹಿಂದಿನ ಕಥೆ

ಸಹಜವಾಗಿ ಈ ಪ್ರಕರಣ ಸಾಕಷ್ಟು ಆತಂಕ ಸೃಷ್ಟಿಸಿತ್ತು. ಪ್ರಕರಣ ಬೇಧಿಸಿರುವ ಪೊಲೀಸರು ಈ ಉಪಕರಣ ದಿಲ್ಲಿ ವಿಶ್ವವಿದ್ಯಾನಿಲಯದಲ್ಲಿ ಬಳಕೆಯಾಗುತ್ತಿತ್ತು ಎಂಬುದನ್ನು ಪತ್ತೆಹಚ್ಚಿದೆ ಎಂದು ದಿಲ್ಲಿ ನಗರ ಜಂಟಿ ಪೊಲೀಸ್ ಆಯುಕ್ತ ಅಜಯ್ ಕಶ್ಯಪ್ ವಿವರಿಸಿದ್ದಾರೆ. ಈ ಉಪಕರಣವನ್ನು ಸರಿಯಾಗಿ ನಾಶಗೊಳಿಸದ ಹಿನ್ನೆಲೆಯಲ್ಲಿ ಈ ಅನಾಹುತ ಸಂಭವಿಸಿದೆ. ಇದರ ಹೊರತಾಗಿಯೂ ಈ ಪ್ರಕರಣದ ಹಿಂದೆ ಯಾವುದೇ ಉಗ್ರಗಾಮಿ ಸಂಘಟನೆಗಳ ಕೈವಾಡವನ್ನು ತಳ್ಳಿಹಾಕಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X