ತ್ವರಿತ ಅಲರ್ಟ್ ಗಳಿಗಾಗಿ
For Daily Alerts

ಭೂಮಿಯ ಜಲಮೂಲ ಯಾವುದಯ್ಯ?
ಫ್ಲೋರಿಡಾ, ಏ.29:ಭೂಮಿಯ ಜಲಮೂಲ ಯಾವುದಯ್ಯಾ ಎಂದರೆ, ಬಹುಶಃ ಯಾರಲ್ಲೂ ಈವರೆಗೂ ಸ್ಪಷ್ಟ ಉತ್ತರವಿರಲಿಲ್ಲ. ಆದರೆ, ಈಗ ಮಂಗಳ ಹಾಗೂ ಶನಿ ಗ್ರಹಗಳ ನಡುವೆ ಕಂಡು ಬಂದಿರುವ ಮಂಜು ಮಿಶ್ರಿತ ಆಕಾಶಕಾಯಗಳು, ವಿಶ್ವದ ಜಲಮೂಲವನ್ನು ಪತ್ತೆ ಹಚ್ಚಲು ಸಹಕಾರಿಯಾಗಿದೆ ಎಂದು ಖ್ಯಾತ ವಿಜ್ಞಾನ ಪತ್ರಿಕೆ ನೇಚರ್ ಹೇಳಿಕೊಂಡಿದೆ.
ಸೂರ್ಯನಿಂದ ಸುಮಾರು 479 ಮಿಲಿಯನ್ ಕಿ.ಮೀ ದೂರದಲ್ಲಿರುವ 24 ಥಿಮಿಸಿಸ್ ಆಕಾಶಕಾಯವನ್ನು ಅಧ್ಯಯನ ಮಾಡುತ್ತಿದ್ದ ವಿಜ್ಞಾನಿಗಳ ತಂಡಕ್ಕೆ ಭೂಮಿಯ ಜಲಮೂಲದ ಕುರುಹು ಸಿಕ್ಕಿದೆ.ಹವಾಯಿ ದ್ವೀಪದ ಮೌನಾ ಕೀ ಎಂಬಲ್ಲಿ ಇನ್ ಫ್ರಾ ರೆಡ್ ಟೆಲಿಸ್ಕೋಪ್ ಬಳಸಿ 24 ಥೀಮಿಸ್ ನೋಡುತ್ತಿದ್ದ ವಿಜ್ಞಾನಿಗಳಿಗೆ ಅಚ್ಚರಿ ಕಾದಿತ್ತು. ಅಲ್ಲಿ ನೀರಿನ ಪಸೆಯಲ್ಲದೆ, ಜೀವಸೆಲೆಯು ಕಂಡಿದೆ.
ದ್ರವೀಕೃತ ಮಂಜು24 ಥಿಮೀಸ್ ಆಕಾಶಕಾಯದ ಹೊರಮೈಯನ್ನು ತಬ್ಬಿಕೊಂಡಿದೆ.ಹಾಗಾಗಿ, ಈ ಅಕಾಶಕಾಯ ಹಾಗೂ ಧೂಮಕೇತುಗಳ ಹೊಡೆತ ಭೂಮಿಯ ಜಲ ಉದ್ಭವ ಹಾಗೂ ಜೀವಸೆಲೆಗೆ ಮೂಲ ಕಾರಣ ಇರಬಹುದು ಎಂದು ಫ್ಲೋರಿಡಾ ವಿವಿಯ ವಿಜ್ಞಾನಿಗಳ ನಂಬಿಕೆ. ಈ ಬಗ್ಗೆ ಸಂಶೋಧನೆ ಇನ್ನೂ ಮುಂದುವರೆದಿದೆ.
Comments
ನೀರು ಭೂಮಿ ವಿಜ್ಞಾನ ಖಗೋಳ ವಿಜ್ಞಾನ ಫ್ಲೋರಿಡಾ earth water asteroid telescope scientist florida america nature
Story first published: Thursday, April 29, 2010, 15:58 [IST]