ಪ್ರೇಮನಾಥ್, ಕೆಎಂಎಫ್ ನೂತನ ಎಂಡಿ
ಬೆಂಗಳೂರು,
ಏ.29: ಕರ್ನಾಟಕ ಹಾಲು ಮಹಾ ಮಂಡಲದ(ಕೆಎಂಎಫ್) ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಎ ಎಸ್ ಪ್ರೇಮನಾಥ್(ಪ್ರಭಾರಿ) ಬುಧವಾರ ಸಂಜೆ ನೇಮಕಗೊಂಡಿದ್ದಾರೆ. ಕಳೆದ ಮುವ್ವತ್ತು ವರ್ಷಗಳಿಂದ ಕೆಎಂಎಫ್ ನಲ್ಲಿ ವಿವಿಧ ಹುದ್ದೆಗಳಲ್ಲಿ ಪ್ರೇಮನಾಥ್ ಸೇವೆ ಸಲ್ಲಿಸಿದ್ದಾರೆ. id="toptextpromo">ಇದುವರೆಗೂ
ಪ್ರೇಮನಾಥ್ ಮಾರುಕಟ್ಟೆ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಎಂಎಫ್ ನ ಅಧ್ಯಕ್ಷ ಜಿ ಸೋಮಶೇಖರರೆಡ್ಡಿ ಹೊರಡಿಸಿದ ಆದೇಶದ ಹಿನ್ನೆಲೆಯಲ್ಲಿ ಅವರು ಬುಧವಾರ ನಡೆದ ಸರಳ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡರು. id='are-slot-1' class='oiad oi-axt oiadv'> id='top-searched-articles'>ಕೆಎಂಎಫ್
ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಡಾ.ವೆಂಕಟರಾಮು ಅವರನ್ನು ಬೆಂಗಳೂರು ಡೇರಿ ವ್ಯವಸ್ಥಾಪಕ ನಿರ್ದೇಶಕ ಸ್ಥಾನಕ್ಕೆ ವರ್ಗಾವಣೆ ಮಾಡಲಾಗಿದೆ. ಮದರ್ ಡೇರಿ ನಿರ್ದೇಶಕರಾಗಿದ್ದ ಕಾಕಡೆ ಅವರನ್ನು ಕೆಎಂಎಫ್ ಮಾರುಕಟ್ಟೆ ವಿಭಾಗದ ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.











Click it and Unblock the Notifications