Get Updates
Get notified of breaking news, exclusive insights, and must-see stories!

ಫೋನ್ ಕದ್ದಾಲಿಕೆ : ಕೇಂದ್ರ ಗಡಗಡ

LK Advani
ನವದೆಹಲಿ, ಏ. 26 : ರಾಜಕಾರಣಿಗಳ ಫೋನ್ ಕದ್ದಾಲಿಕೆ ಮತ್ತು ಐಪಿಎಲ್ ನಲ್ಲಿ ನಡೆದಿರುವ ಹಣಕಾಸು ಅವ್ಯವಹಾರಗಳಿಗೆ ಸಂಬಂಧಿಸಿದಂತೆ ಇಂದು ಸಂಸತ್ತಿನ ಉಭಯ ಸದನಗಳಲ್ಲಿ ಪ್ರತಿಪಕ್ಷಗಳ ಪ್ರಕರಣವನ್ನು ಜಂಟಿ ಸದನ ಸಮಿತಿಗೆ ವಹಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದವು. ಇದರಿಂದ ಸದನದಲ್ಲಿ ತೀವ್ರ ಗದ್ದಲ ಚರ್ಚೆ ವಾಗ್ವಾದಗಳು ನಡೆದಿದ್ದರಿಂದ ಸದನವನ್ನು ನಾಳೆಗೆ ಮುಂದೂಡಲಾಯಿತು.

ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ಸದನ ಆರಂಭಗೊಳ್ಳುತ್ತಿದ್ದಂತೆಯೇ ಪ್ರತಿಪಕ್ಷಗಳು ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು. ಸರಕಾರ ರಾಜಕೀಯ ಮುಖಂಡರು ಅದರಲ್ಲಿ ಮುಖ್ಯವಾಗಿ ಬಿಜೆಪಿ ಸರಕಾರದ ವಿರುದ್ಧ ಗದಾಪ್ರಹಾರವನ್ನೇ ನಡೆಸಿತು. ಸರಕಾರ ನಡೆದುಕೊಳ್ಳುತ್ತಿರುವ ಕ್ರಮ 1975ರ ತುರ್ತು ಪರಿಸ್ಥಿತಿಯನ್ನು ನೆನಪಿಸುವಂತಿದೆ ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮನಮೋಹನ್ ಸಿಂಗ್ ಉತ್ತರಿಸಬೇಕೆಂದು ಅವರು ಪಟ್ಟುಹಿಡಿದರು.

ಆಗ ಮಾತು ಆರಂಭಿಸಿದ ಕೇಂದ್ರದ ಗೃಹ ಸಚಿವ ಪಿ ಚಿದಂಬರಂ ಅವರು, ಸರಕಾರ ಫೋನ್ ಕದ್ದಾಲಿಕೆ ನಡೆಸಿಲ್ಲ. ಅಂತಹ ಯಾವುದಾದರೂ ಉದಾಹರಣೆ ತೋರಿಸಿ ಎಂದಾಗ ಬಿಜೆಪಿ ಸಂಸದರು, ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು. ಸದನದಲ್ಲಿ ಕೂಗಾಟ, ವಾಗ್ವಾದ ನಡೆದವು. ಮಧ್ಯೆ ಪ್ರವೇಶಿಸಿದ ಸ್ಫೀಕರ್ ಮೀರಾ ಕುಮಾರ್ ಸದನದ ಕಾರ್ಯಕಲಾಪಗಳನ್ನು ಮಂಗಳವಾರಕ್ಕೆ ಮುಂದೂಡಿದರು.

ಕೇಂದ್ರದ ಕೃಷಿ ಸಚಿವ ಶರದ್ ಪವಾರ್, ಸಿಪಿಎಂ ಮುಖಂಡ ಪ್ರಕಾಶ್ ಕಾರಟ್, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಫೋನ್ ಗಳನ್ನು ಕದ್ದಾಲಿಸಲಾಗಿದೆ ಎಂಬ ವಿಸ್ತೃತ ವರದಿಯೊಂದನ್ನು ಔಟ್ ಲುಕ್ ಪತ್ರಿಕೆ ಸವಿವರವಾಗಿ ತನಿಖಾ ವರದಿ ಪ್ರಕಟಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+