ದೀರ್ಘಾವಧಿ ರಜೆ ಮೇಲೆ ಸಿ.ಜೆ. ದಿನಕರನ್?
ನವದೆಹಲಿ,
ಏ.24: ರಜೆ ಮೇಲೆ ತೆರಳಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ದೀರ್ಘಕಾಲದ ರಜೆ ಮೇಲೆ ತೆರಳುವ ಸಾಧ್ಯತೆಯಿದೆ. ಈ ಹಿಂದೆ ಸುಪ್ರೀಂ ಕೋರ್ಟ್ ಅವರನ್ನು ಸಿಕ್ಕಿಂ ಹೈಕೋರ್ಟ್ ಗೆ ವರ್ಗವಣೆ ಮಾಡಲು ಶಿಫಾರಸು ಮಾಡಿತ್ತು. id="toptextpromo">ಆದರೆ
ಸಿಕ್ಕಿಂ ವಕೀಲರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಕ್ರಮ ಆಸ್ತಿ ಸಂಪಾದನೆ ಆರೋಪ ಹೊತ್ತಿರುವ ಪಿ ಡಿ ದಿನಕರನ್ ಅವರು ದೀರ್ಘ ರಜೆ ಮೇಲೆ ತೆರಳಳಿದ್ದಾರೆ ಎಂಬುದು ದೃಢಪಟ್ಟಿಲ್ಲ. ರಜೆ ಮೇಲೆ ತೆರಳುವುದಾಗಿ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಅಕ್ರಮ
ಆಸ್ತಿ ಸಂಪಾದನೆ ಆರೋಪ ಎದುರಿಸುತ್ತಿರುವ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಮೂರ್ತಿಪಿ ಡಿ ದಿನಕರನ್ ಅವರನ್ನು ರಜೆ ಮೇಲೆ ತೆರಳುವಂತೆ ಸುಪ್ರೀಂಕೋರ್ಟ್ ಉನ್ನತ ಮಟ್ಟದ ಸಮಿತಿ ಸೂಚಿಸಿತ್ತು. ರಾಜ್ಯ ಹೈಕೋರ್ಟ್ ಗೆ ಮುಖ್ಯನಾಯಮೂರ್ತಿಯಾಗಿ ದೆಹಲಿ ಹೈಕೋರ್ಟ್ ನ ಪ್ರಭಾರ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿರುವ ಮದನ್ ಬಿ ಲೋಕೂರ್ ಅವರನ್ನು ನೇಮಕ ಮಾಡಲಾಗಿದೆ.











Click it and Unblock the Notifications