ಲೋಡ್ ಶೆಡ್ಡಿಂಗ್ : ಅದೇ ರಾಗ ಅದೇ ಹಾಡು
ಬೆಂಗಳೂರು,
ಏ. 23 : ವಿದ್ಯುತ್ ಸಮಸ್ಯೆ ನಿವಾರಣೆಗೆ ಪ್ರತಿ ದಿನ 18ಕೋಟಿ ರುಪಾಯಿಗಳಂತೆ ತಿಂಗಳಿಗೆ 540 ಕೋಟಿ ರುಪಾಯಿ ಖರ್ಚು ಮಾಡಿದರೂ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್ ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಅನಿಯಮಿತ ಲೋಡ್ ಶೆಡ್ಡಿಂಗ್ ಕುರಿತು ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು. id="toptextpromo">ಪ್ರತಿ
ದಿನ 7489 ಮೆಗಾವ್ಯಾಟ್ ವಿದ್ಯುತ್ ಬೇಕಾಗಿದ್ದು, ಪ್ರಸ್ತುತ ಎಲ್ಲ ಮೂಲಗಳಿಂದ 6800 ಮೆಗಾವ್ಯಾಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತದೆ. ಒಂದು ಯೂನಿಟ್ ಗೆ 6 ರುಪಾಯಿ ನೀಡಿ ಖಾಸಗಿ ಕಂಪನಿಗಳಿಂದ ಖರೀದಿಸಲಾಗುತ್ತಿದೆ. ತೋರಣಗಲ್ ಜೆಎಸ್ ಡಬ್ಲ್ಯೂ ಕಂಪನಿಯಿಂದ 325 ಮೆ.ವ್ಯಾ. ಸಕ್ಕರೆ ಕಾರ್ಖಾನೆಗಳಿಂದ 200 ಮೆ.ವ್ಯಾ ವಿದ್ಯುತ್ ಖರೀದಿಸಲಾಗುತ್ತಿದೆ. ವಿದ್ಯುತ್ ಖರೀದಿಗೆ ಪಿಸಿಕೆಎಲ್ ಟೆಂಡರ್ ಆಹ್ವಾನಿಸಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ. id='are-slot-1' class='oiad oi-axt oiadv'> id='top-searched-articles'>ರಾಯಚೂರಿನ
ಆರ್ ಟಿಪಿಎಸ್ ಘಟಕದಲ್ಲಿ ಆಗಾಗ ತಾಂತ್ರಿಕ ದೋಷಕಾಣಿಸಿಕೊಳ್ಳುತ್ತಿದ್ದರಿಂದ ವಿದ್ಯುತ್ ಉತ್ಪಾದನೆಯಲ್ಲಿ ವಿಳಂಬವಾಗುತ್ತಿದೆ. ಬೆಂಗಳೂರು ನಗರಕ್ಕೆ 22 ಗಂಟೆ, ಇತರ ನಗರಗಳಿಗೆ 20 ಗಂಟೆ, ಗ್ರಾಮೀಣಪ್ರದೇಶಕ್ಕೆ 6 ಗಂಟೆ ಸಿಂಗಲ್ ಫೇಸ್, 6 ಗಂಟೆ ತ್ರೀಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದು ಸರಕಾರ ನ್ಯಾಯಾಲಯಕ್ಕೆ ವಿವರಿಸಿದೆ.











Click it and Unblock the Notifications