ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೇವತಿ ಸಾವಿನೊಂದಿಗೆ ಆತಂಕದ ಸುದ್ದಿ

By Mahesh
|
Google Oneindia Kannada News

Elephant population declining in Karnataka
ಮೈಸೂರು/ಬೆಂಗಳೂರು, ಏ.23: ಮೈಸೂರು ದಸರಾದಲ್ಲಿ ಸುಮಾರು 15 ವರ್ಷಗಳ ಕಾಲ ಗಂಭೀರ ನಡೆಯಿಟ್ಟ್ಟು, ಕಿರಿಯ ಗಜಗಳಿಗೆ ಮಾದರಿಯಾಗಿದ್ದ 74 ವರ್ಷದ ಆನೆ ರೇವತಿ ಗುರುವಾರ ಸುಂಕದಕಟ್ಟೆ ಅರಣ್ಯ ಶಿಬಿರದಲ್ಲಿ ಮೃತ ಪಟ್ಟಿದೆ. ಈ ಸಾವಿನ ಸುದ್ದಿಯ ಜೊತೆಗೆ ಕರ್ನಾಟಕದಲ್ಲಿ ಆನೆಸಂತತಿ ಕಡಿಮೆಯಾಗಿರುವ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಿಂದ ವರದಿ ಬಂದಿದೆ.

ಕರ್ನಾಟಕದಲ್ಲಿ ಆನೆ ಸಂತತಿ ಕ್ಷೀಣಿಸುತ್ತಿದ್ದು, ತಮಿಳುನಾಡಿನಲ್ಲಿ ಹೆಚ್ಚಳವಾಗಿದೆ. 1993 ರಲ್ಲಿ 2,307 ಇದ್ದ ಕಾಡಾನೆಗಳ ಸಂಖ್ಯೆ 1997 ರಲ್ಲಿ 2,971 ಹಾಗೂ 2002 ರಲ್ಲಿ 3,052 ಆಗಿದೆ. ಈಗಿನ ಅಂದಾಜಿನಂತೆ ಆನೆಗಳ ಸಂಖ್ಯೆ ದ್ವಿಗುಣವಾಗಿದ್ದು, ರಾಜ್ಯದಲ್ಲಿ ತಮಿಳುನಾಡಿನ ಅನೆ ಸಂತತಿಗಿಂತ ಒಂದು ಸಾವಿರದಷ್ಟು ಕಮ್ಮಿಯಿರುವ ಸಾಧ್ಯತೆಯಿದೆ. ಸಂಪೂರ್ಣ ವರದಿ ಇನ್ನೂ ಅಧಿಕೃತವಾಗಿ ಪ್ರಕಟವಾಗಬೇಕಿದೆ.

ಇದು ಕಾಡಾನೆಗಳ ಅಂದಾಜು ಸಂಖ್ಯೆಯಾದರೆ, ಇನ್ನು ಮಠ ಮಾನ್ಯಗಳಲ್ಲಿರುವ ಆನೆಗಳ ಗಣತಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿದೆ. ಕರ್ನಾಟಕದಂತೆ ಕೇರಳದಲ್ಲೂ ಕಾಡನೆಗಳ ಸಂಖ್ಯೆ ಇಳಿಮುಖ ಕಂಡಿದೆ. ರಾಜ್ಯದಲ್ಲಿ ದುಬಾರೆ, ಸಕ್ರಬೈಲು, ಚಾಮರಾಜನಗರ ಅರಣ್ಯ ಪ್ರದೇಶಗಳಲ್ಲಿನ ಆನೆ ಶಿಬಿರಗಳಿಗೆ ಇನ್ನಷ್ಟು ವ್ಯವಸ್ಥಿತ ಕಾರ್ಯ ಆಗಬೇಕಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X