ಬೆಂಗಳೂರಲ್ಲಿ ಮಾತ್ರ ನೀರಿನ ಕರ ಹೆಚ್ಚಳ
ಬೆಂಗಳೂರು,
ಏ. 22 : ಬೆಂಗಳೂರು ಹೊರತಾಗಿ ರಾಜ್ಯದ ವಿವಿಧ ನಗರ ಪ್ರದೇಶದಲ್ಲಿ ನೀರಿನ ದರ ಹೆಚ್ಚಳ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಎಸ್ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. id="toptextpromo">ಮೈಸೂರಿನ
ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬ್ರಿಟಿಷ್ ರಾಯಭಾರಿ ಕಚೇರಿಯ ಹೈಕಮೀಷನರ್ ರಿಚರ್ಡ್ ಹೈಡ್ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ನಿಗದಿಯಾಗಿರುವ ನೀರಿನ ಕರ ಸರಿಯಾದ ಪ್ರಮಾಣದಲ್ಲಿ ವಸೂಲಿ ಆಗಿಲ್ಲ. id='are-slot-1' class='oiad oi-axt oiadv'> id='top-searched-articles'>ಶೇ.
30, 40ರಷ್ಟು ಮಾತ್ರ ಬರುತ್ತಿದೆ. ಹೀಗಾಗಿ ಮೊದಲು ಪೂರ್ಣ ಪ್ರಮಾಣದ ಕರ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ನೀರಿನ ಕರ ಹೆಚ್ಚಿಸುವ ಪ್ರಸ್ತಾವನೆ ಇಲ್ಲ ಎಂದು ಸುರೇಶ್ ಕುಮಾರ್ ವಿವರಿಸಿದರು.











Click it and Unblock the Notifications