ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪದವಿಧರರಿಗಾಗಿ ಅತಿದೊಡ್ಡ ಉದ್ಯೋಗ ಮೇಳ

By Prasad
|
Google Oneindia Kannada News

Largest campus recruitment drive in Bengaluru
ಬೆಂಗಳೂರು, ಏ. 21 : ಬಿಎ, ಬಿಎಸ್ ಸಿ, ಬಿಕಾಂ ಮಾಡಿದ ಪದವಿಧರರಿಗೆ ಇಲ್ಲೊಂದು ಸಂತಸದ ಸುದ್ದಿಯಿದೆ. ಪದವಿಧರರಿಗಾಗಿಯೇ ದೇಶದ ಅತಿ ದೊಡ್ಡ ಉದ್ಯೋಗ ಮೇಳ ಬೆಂಗಳೂರಿನಲ್ಲಿ ಆರಂಭವಾಗಿದೆ. ಆರ್ಥಿಕ ಹಿಂಜರಿತದಿಂದ ಹಿಂದೇಟು ಹಾಕುತ್ತಿದ್ದ ನೂರಕ್ಕೂ ಹೆಚ್ಚಿನ ಪ್ರತಿಷ್ಠಿತ ಕಂಪನಿಗಳು 7000ಕ್ಕೂ ಹೆಚ್ಚಿನ ಹುದ್ದೆಗಳನ್ನು ತುಂಬಿಕೊಳ್ಳಲು ನೌಕರಿ ಮೇಳದಲ್ಲಿ ಭಾಗವಹಿಸುತ್ತಿವೆ.

ಏಪ್ರಿಲ್ 19ರಿಂದ ಆರಂಭವಾಗಿರುವ ನೌಕರಿ ಮೇಳ ಏಪ್ರಿಲ್ 24ರವರೆಗೆ ಇರಲಿದ್ದು, ಉದ್ಯೋಗ ಅರಸುತ್ತಿರುವ ಪದವಿಧರರು ಭಾಗವಹಿಸಬಹುದಾಗಿದೆ. ಇಂಜಿನಿಯರುಗಳಿಗೆ ಮಾತ್ರವಲ್ಲ ಪದವಿಧರರಿಗೆ ಕೂಡ ಅನೇಕ ಉದ್ಯೋಗಾವಕಾಶಗಳು ಹೇರಳವಾಗಿವೆ ಎಂಬುದಕ್ಕೆ ಈ ಉದ್ಯೋಗ ಮೇಳವೇ ಸಾಕ್ಷಿ.

ಈ ಕ್ಯಾಂಪಸ್ ಸಂದರ್ಶನದಲ್ಲಿ ಬಿಎ, ಬಿಎಸ್ ಸಿ, ಬಿಕಾಂ, ಬಿಬಿಎಂ, ಬಿಎಚ್ಎಂ ಮತ್ತಿತರ ತಾಂತ್ರಿಕ ಮತ್ತು ತಾಂತ್ರಿಕೇತರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಟೆಲಿಕಾಂ, ಐಟಿ, ಬಿಪಿಓ, ಬ್ಯಾಂಕಿಂಗ್, ಹಣಕಾಸು, ಫಾರ್ಮಾ ಮತ್ತು ರಿಟೇಲ್ ಕ್ಷೇತ್ರಗಳಲ್ಲಿ ನಿರತವಾಗಿರುವ ಕಂಪನಿಗಳು ಉದ್ಯೋಗಿಗಳ ಬೇಟೆಗೆ ನಿರತವಾಗಿವೆ.

ಇನ್ಫೋಸಿಸ್, ಆರೇಕಲ್, ಯುರೇಕಾ ಫೋರ್ಬ್ಸ್, ಕಾರ್ವಿ ಸ್ಟಾಕ್ ಬ್ರೋಕರಿಂಗ್, ಪ್ರೆಸ್ಟೀಜ್ ಕನ್ ಸ್ಟ್ರಕ್ಶನ್, ಕಾಫಿ ಡೇ, ಬಿಗ್ ಎಫ್ಎಂ, ರಿಲಾಯನ್ಸ್ ಕಮ್ಯುನಿಕೇಶನ್ಸ್, ರಿಲಾಯನ್ಸ್ ಇನಫ್ರಾಸ್ಟ್ರಕ್ಚರ್ಸ್ ನಂಥ ಕಂಪನಿಗಳು ಪದವಿಧರರ ನೇಮಕಕ್ಕೆ ಮುಂದಾಗಿವೆ. ಅರ್ಜಿ ಗುಜರಾಯಿಸಿದ ಪ್ರತಿ ಅಭ್ಯರ್ಥಿಗೂ ಸಂದರ್ಶನದ ಅವಕಾಶ ದೊರೆಯಲಿದೆ. ಉದ್ಯೋಗಾರ್ಥಿಗಳು ನೂರು ರು. ಪಾವತಿಸಿ ನೊಂದಾಯಿಸಿಕೊಳ್ಳಬಹುದು. ಆಯ್ಕೆಯಾದ ಅರ್ಹರಿಗೆ ಏಳು ಸಾವಿರದಿಂದ ಇಪ್ಪತ್ತೈದು ಸಾವಿರದವರೆಗೆ ಸಂಬಳ ದೊರೆಯುವ ಅವಕಾಶವಿದೆ.

ಕ್ಯಾಂಪಸ್ ಸಂದರ್ಶನ ನಡೆಯುವ ಸ್ಥಳ (ಬೆಂಗಳೂರಿನಲ್ಲಿ ಮಾತ್ರ)

* ಟಿ ಜಾನ್ ಆಚಾರ್ಯ ಬಿ ಸ್ಕೂಲ್
* ಮಹಾರಾಣಿ ಲಕ್ಷ್ಮಿ ಅಮ್ಮಣ್ಮಿ ಮಹಿಳಾ ಕಾಲೇಜು
* ಎಸ್ಆರ್ಎನ್
* ಆದರ್ಶ ಪ್ರಸಿಡೆನ್ಸಿ ಕಾಲೇಜು
* ಎಐಎಮ್ಎಸ್ ಕಾಲೇಜು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X