ಮರಾಠಿ ಲಾಬಿಗೆ ಬಗ್ಗಲ್ಲ, ಯಡಿಯೂರಪ್ಪ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಬೆಳಗಾವಿ ಜಿಲ್ಲೆ ಎಂದಿದ್ದರೂ ಕರ್ನಾಟಕದ ಅವಿಭಾಜ್ಯ ಅಂಗ. ಈ ಬಗ್ಗೆ ಮಹಾಜನ್ ಆಯೋಗದ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಆದರೂ ಬೆಳಗಾವಿ ಬಗ್ಗೆ ಮಹಾರಾಷ್ಟ್ರದ ನಾಯಕರು ಏಕೆ ಮಾತನಾಡುತ್ತಿದ್ದಾರೆ ಎಂದು ತಮಗೆ ತಿಳಿಯುತ್ತಿಲ್ಲ ಎಂದರು.
ಬೆಳಗಾವಿಯನ್ನು 2ನೇ ರಾಜಧಾನಿಯಾಗಿ ಮಾಡಲಾಗುವುದು ಎನ್ನುವ ಹೇಳಿಕೆಗೆ ವ್ಯಕ್ತವಾದ ವಿರೋಧಕ್ಕೆ ಪ್ರತಿಕ್ರಿಯಿಸಿದ ಅವರು, ಬೆಳಗಾವಿಯಲ್ಲಿ ಏನು ಮಾಡಬೇಕು, ಏನು ಮಾಡಬಾರದು ಎನ್ನುವುದು ನಮಗೆ ಗೊತ್ತಿದೆ. ಇದಕ್ಕೆ ಮಹಾರಾಷ್ಟ್ರದವರು ಪ್ರತಿಕ್ರಿಯಿಸುವ ಅಗತ್ಯ ಏನಿದೆ. ಬೆಳಗಾವಿ ಏಂದಿದ್ದರೂ ನಮ್ಮ ಮನೆ. ಅಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕೈಗೊಳ್ಳಲು ಯಾರ ಅನುಮತಿಯೂ ಬೇಕಿಲ್ಲ ಎಂದು ಸ್ಪಷ್ಟಪಡಿಸಿದರು.
ದಶಕಗಳಷ್ಟು ಹಳೆಯದಾದ ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಭಾರಿ ಚರ್ಚೆ, ಕೋಲಾಹಲ, ಪ್ರತಿಭಟನೆ ನಡೆದಿದೆ.











Click it and Unblock the Notifications