ಎಚ್ ಡಿಎಫ್ ಸಿ : ಗೃಹ ಸಾಲ ಬಡ್ಡಿ ದರ ಇಳಿಕೆ
ನವದೆಹಲಿ,
ಏ. 16 : ಹಣದುಬ್ಬರ ಮತ್ತಷ್ಟು ಏರಿಕೆಯಾಗಲಿರುವ ಆತಂಕದ ಮಧ್ಯೆದಲ್ಲಿ ಗೃಹ ನಿರ್ಮಾಣ ರಂಗಕ್ಕೆ ಹಣಕಾಸು ಸೌಲಭ್ಯ ಒದಗಿಸುವ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಹೌಸಿಂಗ್ ಡೆವಲಪ್ ಮೆಂಟ್ ಫೈನಾನ್ಸ್ ಕಾರ್ಪೋರೇಷನ್ (ಎಚ್ ಡಿಎಫ್ ಸಿ) ಗೃಹ ಸಾಲಗಳ ಮೇಲಿನ ಬಡ್ಡಿ ದರವನ್ನು ಶೇ. 8.25ಕ್ಕೆ ಇಳಿಸಿ ಮೂಡಿಸಿದೆ. id="toptextpromo"> ಹೊಸ ಸಾಲಗಳಿಗೆ ಅನ್ವಯಿಸುವ ತನ್ನ ಈ ಹೊಸ ಎರಡು ಬಡ್ಡಿ ದರಗಳ ಯೋಜನೆಯಡಿ, ಎಚ್ ಡಿ ಎಫ್ ಸಿ ಮೊದಲ ವರ್ಷ ಶೇ. 8.25 ಬಡ್ಡಿ ದರ ವಿಧಿಸಲಿದೆ. ಈ ಹೊಸ ಯೋಜನೆಯಡಿ 2011 ರ ಮಾರ್ಚ್ ತಿಂಗಳರೆಗೆ ಶೇ.8.25ರಷ್ಟು ಸ್ಥಿರ ಬಡ್ಡಿ ದರ, ಆನಂತರ ಒಂದು ವರ್ಷದವರೆಗೆ ಶೇ. 9ರ ಬಡ್ಡಿ ದರ ವಿಧಿಸಲಿದೆ. id='are-slot-1' class='oiad oi-axt oiadv'> id='top-searched-articles'> ಸಾಲ ಮರುಪಾವತಿಯ ಉಳಿದ ಅವಧಿಗೆ ಬದಲಾಗುವ ಬಡ್ಡಿ ದರ ಅನ್ವಯಿಸಲಾಗುವುದು.ಸ್ಥಿರ ಬಡ್ಡಿ ದರಗಳು ಎಲ್ಲ ಹೊಸ ಗೃಹ ಸಾಲಗಳಿಗೆ ಅನ್ವಯಿಸಲಿದೆ. ಗೃಹ ಸಾಲದ ಎಲ್ಲ ಮೊತ್ತಕ್ಕೂ ಇದೇ ಬಡ್ಡಿ ದರ ವಿಧಿಸಲಾಗುವುದು ಎಂದು ಎಚ್ ಡಿಎಫ್ ಸಿ ತಿಳಿಸಿದೆ.











Click it and Unblock the Notifications