ಗ್ರಾ.ಪಂ ಚುನಾವಣೆಗೆ ಬಳ್ಳಾರಿ ಸಕಲ ತಯಾರಿ
ಬಳ್ಳಾರಿ,
ಏ.13: ಗ್ರಾಮ ಪಂಚಾಯಿತಿ ಚುನಾವಣೆಗೆ ಬಳ್ಳಾರಿ ಜಿಲ್ಲಾಡಳಿತ ಸಕಹ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬಳ್ಳಾರಿಯ ಒಟ್ಟು 189 ಗ್ರಾಮ ಪಂಚಾಯಿತಿಗಳಲ್ಲಿ 186 ಗ್ರಾಮ ಪಂಚಾಯಿತಿಗಳು ಚುನಾವಣೆಗೆ ಸಜ್ಜಾಗಿವೆ ಎಂದು ಜಿಲ್ಲಾಧಿಕಾರಿ ಬಿ ಶಿವಪ್ಪ ತಿಳಿಸಿದ್ದಾರೆ. id="toptextpromo">ಸುದ್ದಿಗಾರರೊಂದಿಗೆ
ಮಾತನಾಡುತ್ತಿದ್ದ ಅವರು, ಹೊಸಪೇಟೆ ತಾಲೂಕಿನ ಸೀತಾರಾಂ ತಾಂಡ, ಅಂಬ್ಲಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನ ಹಂಪಾಪಟ್ಟಣದಲ್ಲಿ ಈ ಬಾರಿ ಚುನಾವಣೆ ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ಒಟ್ಟು 3,373 ಸ್ಥಾನಗಳಿಗೆ ಪಂಚಾಯ್ತಿ ಚುನಾವಣೆ ನಡೆಯಲಿದೆ ಎಂದು ಅವರು ವಿವರ ನೀಡಿದರು. id='are-slot-1' class='oiad oi-axt oiadv'> id='top-searched-articles'>ಪರಿಶಿಷ್ಟಜಾತಿ/ಪಂಗಡ,
ಇತರೆ ಹಿಂದುಳಿದ ವರ್ಗಗಳು ಹಾಗೂ ಮಹಿಳಾ ಮೀಸಲಾತಿ ಪಟ್ಟಿ ಈಗಾಗಲೆ ಸಿದ್ಧವಾಗಿದೆ ಎಂದು ಶಿವಪ್ಪ ತಿಳಿಸಿದರು. ಜಿಲ್ಲೆಯಲ್ಲಿ ಕುಡಿಯುವ ನೀರಿನ ಪೂರೈಕೆಗೆ ನಿಧಿಯ ಕೊರತೆಯಿಲ್ಲ. ಬಳ್ಳಾರಿ ಜಿಲ್ಲಾ ಪಂಚಾಯಿತಿ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾವು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಸ್ಥಿತಿಯನ್ನು ಅವಲೋಕಿಸುತ್ತಿರುವುದಾಗಿ ತಿಳಿಸಿದರು.











Click it and Unblock the Notifications