ಭ್ರಷ್ಟಾಚಾರ ನಿವಾರಣೆಗೆ ಮಾಹಿತಿ ಹಕ್ಕು ಅಸ್ತ್ರ
ಸವಣೂರ,ಏ.12
: ಮಾಹಿತಿ ಹಕ್ಕು ನಿಯಮ ಆಡಳಿತ ವ್ಯವಸ್ಥೆಯಲ್ಲಿ ಹಲವಾರು ಬದಲಾವಣೆಗಳಿಗೆ ಕಾರಣವಾಗಿದ್ದು, ಸರಕಾರದ ಯೋಜನೆಗಳು ಹಾಗೂ ಕಾರ್ಯಕ್ರಮಗಳಲ್ಲಿ ಪಾರದರ್ಶಕತೆ ಮೂಡಿಸಿ, ಭ್ರಷ್ಟಾಚಾರವನ್ನೂ ನಿಯಂತ್ರಿಸಲು ಸಹಕಾರಿಯಾಗಿದೆ ಎಂದು ನಗರದ ನ್ಯಾಯಾಧೀಶರಾದ ಎಮ್.ಬಿ ಕುಲಕರ್ಣಿ ಅಭಿಪ್ರಾಯ ವ್ಯಕ್ತಪಡಿಸಿದರು. id="toptextpromo">ಸವಣೂರಿನ
ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ದತ್ತುಗ್ರಾಮ ಕಾರಡಗಿಯಲ್ಲಿ ಏರ್ಪಡಿಸಲಾಗಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ಕಾನೂನು ಮಾಹಿತಿ ನೀಡಿದ ಅವರು, ದೇಶದ ಸಾರ್ವಭೌಮತೆಗೆ ಧಕ್ಕೆ ತರುವ ವಿಚಾರಗಳನ್ನು ಹೊರತು ಪಡಿಸಿ, ಉಳಿದೆಲ್ಲ ವಿಷಯಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಪಡೆಯುವ ಹಕ್ಕು ಈ ಅಧಿನಿಯಮದ ಅಡಿ ಇದೆ ಎಂದರು. id='are-slot-1' class='oiad oi-axt oiadv'> id='top-searched-articles'>ಕಾನೂನು
ಮಾಹಿತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ನ್ಯಾಯವಾದಿ ವಿ.ಬಿ ತುರಕಾಣಿ, ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಈ ಅಧಿನಿಯಮ ಸಹಾಯಕಾರಿ ಎಂದರು. ಅಂಗದಾನದ ಬಗ್ಗೆ ಇರುವ ಕಾನೂನಿನ ಅಭಿಪ್ರಾಯಗಳನ್ನು ವಿವರಿಸಿದರು. ಉಪನ್ಯಾಸಕರಾದ ಗಂಗಯ್ಯ, ಡಾ. ಸಿ.ಬಿ ನಂದನ್, ಕಾರ್ಯಕ್ರಮಾಧಿಕಾರಿ ಡಾ. ಎಮ್.ಸಿ ರಾಠೋಡ್, ಆರ್.ಎಸ್ ನಾಯಕ್ ಉಪಸ್ಥಿತರಿದ್ದರು. ಶಿಬಿರಾರ್ಥಿಗಳು ನಿರ್ವಹಿಸಿದರು.











Click it and Unblock the Notifications