ಮಲೇಶಿಯಾದಲ್ಲೂ ನಿತ್ಯಾನಂದನ 'ಲೀಲೆ'?

ಈ ನಡುವೆ, ನಿತ್ಯಾನಂದನನ್ನು ಬೆನ್ನತ್ತಿರುವ ತನಿಖಾ ತಂಡ ವಿದೇಶಗಳಲ್ಲಿಯೂ 'ಲೀಲೆ' ತೋರಿಸಿರುವ ಬಗ್ಗೆ ಸಾಕ್ಷ್ಯ ಹುಡುಕಲು ಮಲೇಶಿಯಾಗೆ ಅಧಿಕಾರಿಗಳನ್ನು ಕಳಿಸಲು ಯೋಚಿಸುತ್ತಿದೆ. ಈಗಾಗಲೆ ತಿಳಿದಿರುವಂತೆ ಅನೇಕ ರಾಷ್ಟ್ರಗಳಲ್ಲಿ ನಿತ್ಯಾನಂದ ಆಶ್ರಮ ಹೊಂದಿದ್ದಾನೆ. ಅಲ್ಲಿಯೂ ಲೈಂಗಿಕ ಹಗರಣ ನಡೆದಿರಬಹುದಾ ಎಂಬುದು ಪೊಲೀಸರ ಅನುಮಾನ.
ಈ ಕುರಿತಂತೆ ನಂಬಲರ್ಹವಾದ ಮಾಹಿತಿ ದೊರೆತರೆ ತನಿಖಾಧಿಕಾರಿಗಳನ್ನು ಮಲೇಶಿಯಾಗೆ ಕಳುಹಿಸಲಾಗುವುದು ಎಂದು ಬೆಂಗಳೂರು ಸಿಐಡಿ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಕೆಎನ್ ಯೋಗಪ್ಪ ತಿಳಿಸಿದ್ದಾರೆ.
ಸಿಐಡಿಗೆ ಈಗಾಗಲೆ 6 ವಿಭಿನ್ನ ಮಹಿಳೆಯರೊಂದಿಗೆ ಸ್ವಾಮಿ ನಿತ್ಯಾನಂದ ಸರಸವಾಡಿರುವ 30 ವಿಡಿಯೋ ಟೇಪುಗಳನ್ನು ಸಿಐಡಿಗೆ ದೊರೆತಿವೆ. ಆದರೆ, ಅವುಗಳ ಸತ್ಯಾಸತ್ಯತೆಯ ಬಗ್ಗೆ ಪರಾಮರ್ಶಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 29 ಜನರನ್ನು ವಿಚಾರಿಸಲಾಗಿದೆ.












Click it and Unblock the Notifications