ಸಾನಿಯಾಗೆ ಭಾರತೀಯ ಹುಡುಗ ಸಿಗಲಿಲ್ಲವೇ?
ಬೆಂಗಳೂರು,
ಏ. 9 : ಸಾನಿಯಾ ಮಿರ್ಜಾಳನ್ನು ಅಂತಾರಾಷ್ಟ್ರೀಯ ಆಟಗಾರ್ತಿಯನ್ನಾಗಿ ಮಾಡಿದ್ದು ಭಾರತ. ಇಂತಹ 120 ಕೋಟಿ ಇರುವ ಭಾರತದಲ್ಲಿ ಆಕೆ ಇಷ್ಟವಾಗುವ ಒಬ್ಬ ಹುಡುಗ ಆಕೆಗೆ ಇಷ್ಟವಾಗಲಿಲ್ಲವೇ ? ಹೋಗಲಿ 15 ಕೋಟಿ ಭಾರತೀಯ ಮುಸ್ಲಿಮರಲ್ಲಿ ಆಕೆಗೊಬ್ಬ ಅರ್ಹ ಮುಸ್ಲಿಮ್ ಯುವಕ ಸಿಗಲಿಲ್ಲವೇ ? ಪಾಕಿಸ್ತಾನ ಮೂಲಕ ಆಟಗಾರನನ್ನು ಮದುವೆಯಾಗುತ್ತಿರುವುದು ಸಂಪೂರ್ಣ ತಪ್ಪು ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. id="toptextpromo"> ಸುವರ್ಣ ನ್ಯೂಸ್ ಚಾನೆಲ್ ನ ಟಾರ್ಗೆಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾನಿಯಾ ಭಾರತಕ್ಕೆ ಅವಮಾನ ಮಾಡಿದ್ದಾಳೆ. ಮದುವೆ ವೈಯಕ್ತಿಕವಾದರೂ, ಪಾಕಿಸ್ತಾನ ಭಾರತದ ವಿರೋಧಿ ದೇಶ. ಇಂತಹ ದೇಶದ ಯುವಕನನ್ನು ಮದುವೆಯಾಗಲು ಆಯ್ಕೆ ಮಾಡಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದರು. id='are-slot-1' class='oiad oi-axt oiadv'> id='top-searched-articles'>ಸಾನಿಯಾ
ಸಾಮಾನ್ಯ ಯುವತಿಯಲ್ಲ. ಆಕೆ ಭಾರತದ ಟೆನ್ನಿಸ್ ಆಟಗಾರ್ತಿ. ಆಕೆಯನ್ನು ಈ ಮಟ್ಟಕ್ಕೆ ಬೆಳೆಸಿದ್ದು ಭಾರತ. ಒಬ್ಬ ಆಟಗಾರ್ತಿ ಇತರಿಗೆ ಮಾದರಿಯಾಗಬೇಕು. ಹೀಗಿರುವಾಗ ಪಾಕಿಸ್ತಾನದ ಆಟಗಾರನನ್ನು ಮದುವೆಯಾಗಲು ಆಯ್ಕೆ ಮಾಡಿಕೊಂಡಿದ್ದು ದುರದೃಷ್ಟಕರ ಸಂಗತಿ. ಸಾನಿಯಾ ದೇಶಕ್ಕೆ ಅಪಮಾನವಾಗುವ ಕೆಲಸ ಮಾಡಿದ್ದಾರೆ. ಭಾರತೀಯ ಮುಸ್ಲಿಮನನ್ನು ಮದುವೆಯಾಗಿದ್ದರೆ ನಮಗೆ ಸಂತೋಷವಾಗುತ್ತಿತ್ತು. 15 ಕೋಟಿ ಮುಸ್ಲಿಮರಲ್ಲಿ ಒಬ್ಬ ಅರ್ಹ ಯುವಕ ಆಕೆಗೆ ಸಿಗಲಿಲ್ಲವೇ ಎಂದು ಪ್ರಮೋದ್ ಮುತಾಲಿಕ್ ಕಿಡಿಕಾರಿದರು.











Click it and Unblock the Notifications