ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಲೆಂಜರ್ಸ್ ಗೆ ಚಾರ್ಜರ್ಸ್ ಚಾಲೆಂಜ್

By Prasad
|
Google Oneindia Kannada News

Anil Kumble, Adam Gilcrist
ಬೆಂಗಳೂರು, ಏ. 8 : ಐಪಿಎಲ್ 2ರ ಫೈನಲ್ ನಲ್ಲಿ ಎದುರಾಗಿದ್ದ ಆಡಮ್ ಗಿಲ್ ಕ್ರಿಸ್ಟ್ ನಾಯಕತ್ವದ ಡೆಕ್ಕನ್ ಚಾರ್ಜರ್ಸ್ ಮತ್ತು ಅನಿಲ್ ಕುಂಬ್ಳೆ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಐಪಿಎಲ್ 3ರಲ್ಲಿ ಪ್ರಥಮಬಾರಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ಸೆಣಸಲಿವೆ. ಹಿಂದಿನ ಟೂರ್ನಿಯಲ್ಲಿ ಚಾರ್ಜರ್ಸ್ ತಂಡ ರಾಯಲ್ಸ್ ತಂಡವನ್ನು ಸದೆಬಡಿದು ಟ್ರೋಫಿ ಎತ್ತಿಹಿಡಿದಿತ್ತು.

ಆಡಿದ ಒಂಬತ್ತು ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ನಾಲ್ಕರಲ್ಲಿ ಸೋಲುಂಡಿರುವ ರಾಯಲ್ ಚಾಲೆಂಜರ್ಸ್ ಸದ್ಯಕ್ಕೆ ನಾಲ್ಕನೇ ಸ್ಥಾನದಲ್ಲಿದೆ. ಈ ಪಂದ್ಯ ಗೆದ್ದರೆ ಸೆಮಿ ಫೈನಲ್ ದಾರಿ ಸುಗಮವಾಗಲಿದೆ. ಆದರೆ, ಡಿಫೆಂಡಿಂಗ್ ಚಾಂಪಿಯನ್ ಆಗಿರುವ ಡೆಕ್ಕನ್ ಚಾರ್ಜರ್ಸ್ ಒಂಬತ್ತು ಪಂದ್ಯಗಳಲ್ಲಿ ಆರರಲ್ಲಿ ಸೋತು ಕಿಂಗ್ ಎಲೆವನ್ ಪಂಜಾಬ್ ಗಿಂದ ಒಂದೇ ಮೆಟ್ಟಿಲು ಮೇಲಿದೆ.

ಎರಡೂ ತಂಡಗಳ ಬಲಾಬಲ ನೋಡಿದರೆ ಆತ್ಮವಿಶ್ವಾಸದಿಂದ ಬೀಗುತ್ತಿರುವ ಬೆಂಗಳೂರು ತಂಡ ಸದೃಢವಾಗಿದೆ. ಬೆಂಗಳೂರು ತಂಡಕ್ಕೆ ಸಮಸ್ಯೆಯಿರುವುದು ಯಾರನ್ನು ಆಯ್ದುಕೊಳ್ಳಬೇಕೆಂಬುದೇ. ಏಕೆಂದರೆ, ತಂಡದಲ್ಲಿ ನಾಲ್ಕೇ ವಿದೇಶಿಯರು ಆಡಬೇಕಿರುವುದರಿಂದ ಬೌಲರ್ ಸ್ಟೇಯ್ನ್ ಮತ್ತು ವಿಕೆಟ್ ಕೀಪರ್ ಬೌಚರ್ ಅಂತ ಆಟಗಾರರು ಬೆಂಚಿನ ಮೇಲೆ ಕೂಡುವಂತಾಗಿದೆ. ನ್ಯೂಜಿಲಂಡ್ ಆಟಗಾರ ರಾಸ್ ಟೇಲರ್ ತಂಡ ಸೇರಿಕೊಂಡಿರುವುದರಿಂದ ಬ್ಯಾಟಿಂಗ್ ಮತ್ತಷ್ಟು ಬಲ ಪಡೆದುಕೊಂಡಿದೆ.

ರನ್ ಗಳಿಕೆಯಲ್ಲಿ ಅಗ್ರ ಸ್ಥಾನದಲ್ಲಿರುವ ಜಾಕ್ ಕಾಲಿಸ್, ಎದುರಾಳಿ ಬೌಲಿಂಗನ್ನು ಧೂಳಿಪಟ ಮಾಡುವ ತಾಕತ್ತಿರುವ ರಾಬಿನ್ ಉತ್ತಪ್ಪ, ಅಷ್ಟೇ ಸಾಮರ್ಥ್ಯವಿರುವ ಟೇಲರ್, ಕೆವಿನ್ ಪೀಟರ್ಸನ್, ದಿ ವಾಲ್ ರಾಹುಲ್ ದ್ರಾವಿಡ್ ಬ್ಯಾಟಿಂಗ್ ಬೆನ್ನೆಲುಬಾಗಿದ್ದಾರೆ. ಕುಂಬ್ಳೆ ಮುಂದಾಳತ್ವದ ಬೌಲಿಂಗಿಗೆ ವಿನಯ್ ಕುಮಾರ್, ಸ್ಟೇಯ್ನ್, ಪ್ರವೀಣ್ ಕುಮಾರ್ ತಕ್ಕ ಬೆಂಬಲ ನೀಡುತ್ತಿದ್ದಾರೆ.

ಸಮಸ್ಯೆ ಎದುರಿಸುತ್ತಿರುವುದು ಡೆಕ್ಕನ್ ಚಾರ್ಜರ್ಸ್. ಡಿಫೆಂಡಿಂಗ್ ಚಾಂಪಿಯನ್ ಎಂಬ ಹಣೆಪಟ್ಟಿ ಕಟ್ಟಿಕೊಂಡು ಬಂದಿದ್ದರೂ ತಂಡ ಹೀನಾಯವಾಗಿ ಸೋಲುತ್ತಿದೆ. ಐಕಾನ್ ಆಟಗಾರನಾಗಿರುವ ವಿವಿಎಸ್ ಲಕ್ಷ್ಮಣ್ ತಂಡಕ್ಕೆ ಭಾರವಾಗಿದ್ದಂತೆ ಆಡುತ್ತಿದ್ದಾರೆ. ಬ್ಯಾಟಿಂಗಿನಲ್ಲಿ ಗಿಲ್ ಕ್ರಿಸ್ಟ್, ಗಿಬ್ಸ್ ಅಂಥ ಕಾಣಿಕೆಯನ್ನೂ ನೀಡಿಲ್ಲ. ಚಮಿಂಡ್ ವಾಸ್ ಅಂಥ ತೀಕ್ಷ್ಣ ಮತ್ತು ನಿಖರತೆಯ ಬೌಲರ್ ಅನ್ನು ಬದಿಗೆ ಸರಿಸಿರುವುದು ದೊಡ್ಡ ಆಘಾತ ನೀಡಿದೆ. ಈ ಪಂದ್ಯ ಗೆದ್ದರೂ ಸೆಮಿ ಫೈನಲ್ ತಲುಪುವ ಕನಸು ದೂರವೇ. ಆಡಬೇಕಿರುವ ಐದು ಪಂದ್ಯದಲ್ಲಿ ಕನಿಷ್ಠ ನಾಲ್ಕನ್ನು ಗೆಲ್ಲಬೇಕಿರುವ ಅನಿವಾರ್ಯತೆ ಚಾರ್ಜರ್ಸ್ ಗಿದೆ.

ಆಟ ಸಂಜೆ 8ಕ್ಕೆ ಆರಂಭವಾಗಲಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು : ಅನಿಲ್ ಕುಂಬ್ಳೆ, ಜಾಕ್ ಕಾಲಿಸ್, ರಾಸ್ ಟೇಲರ್, ಕೆವಿನ್ ಪೀಟರ್ಸನ್, ರಾಹುಲ್ ದ್ರಾವಿಡ್, ಮಾರ್ಕ್ ಬೌಚರ್, ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ, ವಿರಾಟ್ ಕೋಹ್ಲಿ, ಪ್ರವೀಣ್ ಕುಮಾರ್, ಡೇಲ್ ಸ್ಟೇಯ್ನ್, ವಿನಯ್ ಕುಮಾರ್, ಕೆಮರೂನ್ ವೈಟ್.

ಡೆಕ್ಕನ್ ಚಾರ್ಜರ್ಸ್ : ಆಡಂ ಗಿಲ್ ಕ್ರಿಸ್ಟ್, ಸೈಮಂಡ್ಸ್, ಹರ್ಷೆಲ್ ಗಿಬ್ಸ್, ಹರ್ಮಿತ್ ಸಿಂಗ್, ವಿವಿಎಸ್ ಲಕ್ಷ್ಮಣ್, ಮೋನಿಶ್ ಮಿಶ್ರಾ, ಓಜಾ, ರೋಹಿತ್ ಶರ್ಮಾ, ಆರ್ಪಿ ಸಿಂಗ್, ಡ್ವೈನ್ ಸ್ಮಿತ್, ಚಮಿಂಡ ವಾಸ್, ವೇಣುಗೋಪಾಲ್ ರಾವ್, ಅನಿರುದ್ಧ, ಸುಮನ್, ಅರ್ಜುನ್ ಯಾದವ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X