ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಿವಿಂಕ್ ಶಾಸ್ತ್ರಿ ಜಮೀನು ಹರಾಜಿಗೆ ತಡೆ

By Mahesh
|
Google Oneindia Kannada News

KN Srinivas Shastry
ಹೊಸಕೋಟೆ, ಏ.2:ವಿನಿವಿಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸಕೋಟೆ ಸಮೀಪದಲ್ಲಿರುವ ಜಮೀನು ಹರಾಜು ಪ್ರಕ್ರಿಯೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹರಾಜು ಪ್ರಕ್ರಿಯೆಗೆ ತಡೆ ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾವೇದ್ ರಹೀಂ ಈ ಆದೇಶ ಹೊರಡಿಸಿದ್ದಾರೆ.

2008 ರ ವಿನಿವಿಂಕ್ ವಂಚನೆ ಪ್ರಕರಣದ ರೂವಾರಿ ಕೆ.ಎನ್ ಶ್ರೀನಿವಾಸ ಶಾಸ್ತ್ರಿ ಜಮೀನು ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ತನ್ನ ಆಸ್ತಿಯನ್ನು ಹರಾಜು ಹಾಕಿಕೊಂಡು ವಂಚನೆಗೊಳಗಾದವರಿಗೆ ಹಣ ಹಿಂದಿರುಗಿಸುವಂತೆ ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ್ದರು. ಇದನ್ನು ಸುಪ್ರೀಂಕೋಟ್ ನಲ್ಲಿ ಪ್ರಶ್ನಿಸಲಾಗಿತ್ತು. ಅಲ್ಲಿ ಶಾಸ್ತ್ರಿಗೆ ಷರತ್ತು ಬದ್ಧ ಜಾಮೀನು ದೊರೆತಿತ್ತು.

ಈ ನಡುವೆ ಹೊಸಕೋಟೆಯ 20 ಎಕರೆ ಜಮೀನು ಕೂಡ ಹರಾಜು ಪ್ರಕ್ರಿಯೆಯಲ್ಲಿ ಸೇರ್ಪಡೆಗೊಂಡಿತ್ತು. ಆದರೆ, ಈ ಜಮೀನಿನ ಹಿಂದಿನ ಮಾಲೀಕರು ಹರಾಜನ್ನು ವಿರೋಧಿಸಿದ್ದಾರೆ. ತಾವು ಶಾಸ್ತ್ರಿಗೆ ಜಮೀನು ನೀಡಿದ್ದರೂ, ಪೂರ್ತಿ ಮೊತ್ತ ಪಾವತಿಸಿರಲಿಲ್ಲ. ಆದ್ದರಿಂದ ಜಮೀನು ಸಂಪೂರ್ಣವಾಗಿ ಶಾಸ್ತ್ರಿಗೆ ಸೇರಿದ್ದಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ. ಸುಮಾರು 20,184 ಹೂಡಿಕೆದಾರರು ಸುಮಾರು 203 ಕೋಟಿ ರೂಗಳನ್ನು ವಿನಿವಿಂಕ್ ಸೌಹಾರ್ದ ಲಿ.ನಲ್ಲಿ ಹಣ ತೊಡಗಿಸಿ, ತೊಂದರೆ ಅನುಭವಿಸಿದ್ದರು.

English summary
ViniVinc Sastry ViniVinv Souharda Limited
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X