ಬಿಎಂಟಿಸಿ ಬಸ್ ದರ ಏರಿಕೆ ಸದ್ಯಕ್ಕಿಲ್ಲ: ಅಶೋಕ್

ಬಿಬಿಎಂಪಿ ಚುನಾವಣೆ ಬಳಿಕ ಬಿಎಂಟಿಸಿ ಬಸ್ ದರ ಏರಿಕೆ ಮಾಡಲಾಗುವುದು ಎಂಬ ವಿಚಾರ ಕೇಳಿಬಂದಿತ್ತು. ಆದರೆ ಯಾವುದೇ ದರವನ್ನು ಸದ್ಯಕ್ಕೆ ಏರಿಸಲಾಗುವುದಿಲ್ಲ ಎಂದು ಹೇಳಿದರು. ವಾಹನ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಟ್ರಕ್ ಟರ್ಮಿನಲ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು, ಮೈಸೂರು, ಹುಬ್ಬಳ್ಳಿ , ಗುಲ್ಬರ್ಗ, ಹೊಸಪೇಟೆ ಹಾಗೂ ಕಾರವಾರ ಸೇರಿದಂತೆ ರಾಜ್ಯದ ಐದು ಕಡೆಗಳಲ್ಲಿ ಸ್ಥಾಪಿಸಲಾಗುತ್ತಿದೆ ಎಂದರು.
ಮೈಸೂರು ಬೆಂಗಳೂರು ನಡುವೆ ಹತ್ತು ಐಶಾರಾಮಿ ಬಸ್ ಸಂಚಾರವನ್ನು ಮುಂದಿನ ಎರಡು ತಿಂಗಳಲ್ಲಿಆರಂಭಿಸಲಾಗುವುದು. ಇದಕ್ಕಾಗಿ ಮರ್ಸಿಡಿಸ್ ಬೆಂಜ್ ಕಂಪನಿಯ 10 ಬಸ್ ಗಳನ್ನು ಖರೀದಿಸಲಾಗುವುದು.ರಾಜ್ಯದಲ್ಲಿ ಯಾವುದೇ ಪೈಲಟ್ ಯೋಜನೆ ಜಾರಿಯಾದರೂ, ಆ ಯೋಜನೆಯಲ್ಲಿ ಮೈಸೂರು ಸೇರ್ಪಡೆಗೊಳ್ಳಲಿದೆ ಎಂದು ತಿಳಿಸಿದರು. ಇದಾದ ಬಳಿಕ ಸಚಿವರು ನಗರ ಹೊರವಲಯದಲ್ಲಿ ಆರ್‌ಟಿಒ ವತಿಯಿಂದ ನಿರ್ಮಿಸಲಾಗುತ್ತಿರುವ ವಾಹನ ಚಾಲನಾ ಸ್ಥಳ ಪರಿಶೀಲನೆ ನಡೆಸಿದರು.
ಮೈಸೂರಿನಲ್ಲಿ ಆರಂಭಗೊಳ್ಳುತ್ತಿರುವ ಟ್ರಕ್ ಟರ್ಮಿನಲ್ 22 ಕೋಟಿ ರೂ.ಗಳ ಯೋಜನೆಯಾಗಿದ್ದು, ಸರ್ಕಾರ ಈಗಾಗಲೇ13 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಅಲ್ಲದೆ ಟೆಂಡರ್ ಪೂರ್ಣಗೊಂಡಿದ್ದು, ಸದ್ಯದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶಾಸಕ ತನ್ವೀರ್‌ಸೇಠ್, ಗೃಹಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ, ಸಾರಿಗೆ ಇಲಾಖೆ ಆಯುಕ್ತ ಭಾಸ್ಕರ್‌ರಾವ್, ವ್ಯವಸ್ಥಾಪಕ ನಿರ್ದೇಶಕ ಮದನ್‌ಮೋಹನ್, ಸ್ಥಳೀಯ ಮುಖಂಡರಾದ ಯಶಸ್ವಿನಿ ಸೋಮಶೇಖರ್, ಬಿ.ಪಿ.ಮಂಜುನಾಥ್ ಸೇರಿದಂತೆ ಮತ್ತಿತರರು ಇದ್ದರು.











Click it and Unblock the Notifications