ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟಿ20 ವಿಶ್ವಕಪ್ ಗೆ ಆಯ್ಕೆ ;ಗಾಯಳುಗಳದ್ದೇ ಸಮಸ್ಯೆ

By Mahesh
|
Google Oneindia Kannada News

Injuries cast shadow on T20 World Cup selection
ಮುಂಬೈ, ಮಾ.26: ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಮೂರನೇ ವಿಶ್ವಕಪ್ ಟಿ-20 ಕ್ರಿಕೆಟ್ ಚಾಂಪಿಯನ್‌ಷಿಪ್‌ಗಾಗಿ ಶುಕ್ರವಾರ 15 ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗುತ್ತಿದ್ದು ಕೆಲ ಹೊಸಮುಖಗಳು ಸ್ಥಾನ ಗಿಟ್ಟಿಸಲು ಪೈಪೋಟಿಯಲ್ಲಿವೆ. ಆದರೆ ಎಲ್ಲಕ್ಕಿಂತ ಮುಖ್ಯವಾಗಿ
ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದ ಬಳಲುತ್ತಿರುವುದು ಆಯ್ಕೆದಾರರ ಮುಂದೆ ಇರುವ ದೊಡ್ಡ ಪ್ರಶ್ನೆ

ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಆರಂಭಿಕ ಬ್ಯಾಟ್ಸ್‌ಮನ್ ಗೌತಮ್ ಗಂಭೀರ್ ಗಾಯಾಳು ಪಟ್ಟಿಯಲ್ಲಿರುವ ಪ್ರಮುಖರು. ಪ್ರಸ್ತುತ ನಡೆಯುತ್ತಿರುವ ಐಪಿಎಲ್‌ನ ಕೆಲ ಪಂದ್ಯಗಳಿಂದ ಹೊರಗುಳಿದಿರುವ ಧೋನಿ ಮತ್ತು ಗಂಭೀರ್ ಸಂಪೂರ್ಣ ಚೇತರಿಸಿಕೊಳ್ಳುವ ಅವಧಿಯ ಮೇಲೆ ಅವರ ಆಯ್ಕೆ ನಿಂತಿರುತ್ತದೆ. ನೆನ್ನೆ ಮುಂಬೈ ಇಂಡೀಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಧೋನಿ ಆಡುವ ಮೂಲಕ ಕೊಂಚ ಭರವಸೆ ಮೂಡಿಸಿದ್ದಾರೆ. ಪಕ್ಕೆಲುಬು ನೋವಿನಿಂದ ಬಳಲುತ್ತಿರುವ ಮಧ್ಯಮ ವೇಗಿ ಆಶಿಶ್ ನೆಹ್ರಾ ಕೂಡ ಐಪಿಎಲ್‌ನಲ್ಲಿ ಇದುವರೆಗೂ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಪರ ಒಂದೂ ಪಂದ್ಯವನ್ನಾಡಿಲ್ಲ.

ಪ್ರಮುಖ ಆಟಗಾರರು ಸ್ಥಾನ ಪಡೆಯುವುದು ಖಚಿತವಾಗಿದ್ದರೂ ಸಹ ಕೆಲ ಹೊಸಬರ ಹೆಸರುಗಳು ಬಲವಾಗಿ ಕೇಳಿಬರುತ್ತಿವೆ. ಮುಖ್ಯವಾಗಿ ಕರ್ನಾಟಕದ ಯುವ ಪ್ರತಿಭೆ ಮನೀಷ್ ಪಾಂಡೆ ಬಗ್ಗೆ ಚರ್ಚೆ ನಡೆದಿದೆ. ಈ ಸಾಲಿನ ರಣಜಿ ಋತುವಿನಲ್ಲಿ ಅತಿ ಹೆಚ್ಚು ರನ್ ಸಂಪಾದಿಸಿದ ಖ್ಯಾತಿ ಹೊಂದಿರುವ ಮನೀಷ್ ಐಪಿಎಲ್‌ನಲ್ಲಿ ಕೂಡ ರಾಯಲ್ ಚಾಲೆಂಜರ್‍ಸ್ ಬೆಂಗಳೂರು ತಂಡದ ಪರ ಮಿಂಚುತ್ತಿದ್ದಾರೆ.

ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್‌ಸಿಬಿ ತಂಡದ ರಾಬಿನ್ ಉತ್ತಪ್ಪ, ವಿನಯ್ ಕುಮಾರ್ ,ಮುಂಬಯಿ ಇಂಡಿಯನ್ಸ್‌ನ ಸೌರಭ್ ತಿವಾರಿ ಹಾಗೂ ಕೋಲ್ಕೊತಾ ನೈಟ್ ರೈಡರ್‍ಸ್‌ನ ಮುರಳಿ ಕಾರ್ತಿಕ್ ಸಂಭಾವ್ಯರ ಪಟ್ಟಿಯಲ್ಲಿ ಇಲ್ಲದಿದ್ದರೂ ಸಹ ಆಯ್ಕೆದಾರರು ಇವರ ಆಯ್ಕೆ ಸಮಿತಿಗೆ ಗಾಯಾಳುಗಳದ್ದೇ ದೊಡ್ಡ ಪ್ರಶ್ನೆ

ವೆಸ್ಟ್ ಇಂಡೀಸ್‌ನಲ್ಲಿ ಏಪ್ರಿಲ್ 30 ರಿಂದ ಮೇ 16 ರ ವರೆಗೆ ನಡೆಯಲಿರುವ ಈ ಪಂದ್ಯಾವಳಿಗಾಗಿ ಈ ಮೊದಲೇ ಭಾರತ ತಂಡದ 30 ಸದಸ್ಯರ ಸಂಭಾವ್ಯರ ಪಟ್ಟಿ ಪ್ರಕಟಿಸಲಾಗಿದೆ. ಕೃಷ್ಣಮಾಚಾರಿ ಶ್ರೀಕಾಂತ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿ ಈ ಪಟ್ಟಿಯಿಂದಲೇ 15 ಆಟಗಾರರನ್ನು ಆಯ್ಕೆ ಮಾಡಲಿದೆ. ಇಂಗ್ಲೆಂಡ್‌ನಲ್ಲಿ ಕಳೆದ ಜೂನ್‌ನಲ್ಲಿ ನಡೆದ ಎರಡನೇ ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ಭಾರತ ವಿಫಲವಾಗಿತ್ತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X