ನಕ್ಸಲ್ ಸಂಸ್ಥಾಪಕ ಸನ್ಯಾಲ್ ಆತ್ಮಹತ್ಯೆ

75 ವರ್ಷದ ಅವಿವಾಹಿತ ಸನ್ಯಾಲ್ ವಯಸ್ಸಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದರು. 1969 ರಲ್ಲಿ ಇವರು ಸಿಪಿಐ ( ಮಾರ್ಕಿಸ್ಟ್ ಲೆನಿನ್) ಪಕ್ಷವನ್ನು ಸ್ಥಾಪಿಸಿದ್ದರು. ಮೇ 25 , 1967 ರಲ್ಲಿ ಸನ್ಯಾಲ್ ಚಾರು ಮಜುಂದಾರ್ ಜೊತೆ ಸೇರಿ ಉತ್ತರ ಬಂಗಾಳದ ನಕ್ಸಲ್ಬಾರಿ ಎನ್ನುವ ಸಣ್ಣ ಗ್ರಾಮದಲ್ಲಿ ನಕ್ಸಲ್ ಚಳುವಳಿ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆ ನಡೆದಿದ್ದು ಶವವನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ ಎಂದು ಉತ್ತರ ಬಂಗಾಳದ ಪೋಲಿಸ್ ನಿರ್ದೇಶಕ ಕೆ ಎಲ್ ತಮ್ತಾ ಹೇಳಿಕೆ ನೀಡಿದ್ದಾರೆ.












Click it and Unblock the Notifications