ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾರತಮ್ಯಕ್ಕೆ ಕೊನೆ : ಜೆಡಿಎಸ್ ಪ್ರಣಾಳಿಕೆ

By Mrutyunjaya Kalmat
|
Google Oneindia Kannada News

PGR Sindhia
ಬೆಂಗಳೂರು, ಮಾ. 23 : ತಾರತಮ್ಯಕ್ಕೆ ಕೊನೆ, ಇದು ನಮ್ಮ ವಾಗ್ದಾನ ಎಂಬ ವಿನೂತನ ಭರವಸೆಯೊಂದಿಗೆ ಜೆಡಿಎಸ್ ತನ್ನ ಪ್ರಣಾಳಿಕೆಯನ್ನು ಮಂಗಳವಾರ ಬಿಡುಗಡೆ ಮಾಡಿತು. ಪಕ್ಷದ ಕಾರ್ಯಾಧ್ಯಕ್ಷ ಪಿಜಿ ಆರ್ ಸಿಂಧ್ಯಾ, ಸಿ ನಾರಾಯಣಸ್ವಾಮಿ, ಡಿ ಮಂಜುನಾಥ್ ಉಪಸ್ಥಿತಿರಿದ್ದರು. ಆದರೆ, ಬಿಬಿಎಂಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡುವ ಮಹತ್ವದ ಸಂದರ್ಭದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗೈರು ಹಾಜರಿ ಎದ್ದು ಕಾಣುತ್ತಿತ್ತು.

*ಕಾರ್ಮಿಕರಿಗೆ ವಿಶೇಷ ಆರೋಗ್ಯ ವಿಮೆ ಯೋಜನೆ.
*ಅನಾಥ ಮಕ್ಕಳಿಗೆ ಶಾಲೆ ಆರಂಭ.
*ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ನಿರ್ಮಾಣ.
*ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಪರಿಷ್ಕರಣೆ.
*ಅಕ್ರಮ ಸಕ್ರಮ ದಂಡ ಪ್ರಮಾಣ ಪರಿಷ್ಕರಣೆ.
*ನಾಲ್ವರು ಅಭಿವೃದ್ಧಿ ಆಯುಕ್ತರ ನೇಮಕ.
*ಬಿಡಿಎ ಅಕ್ರಮ ಆಸ್ತಿ ತಡೆಗೆ ಕ್ರಮ.
*ರಾಜಕಾಲುವೆ ಅತಿಕ್ರಮ ತೆರವು ಕಡ್ಡಾಯ.
*ಪ್ರತಿ ವಾರ್ಡ್ ನಲ್ಲೂ ಪಾರ್ಕ್ ಕಡ್ಡಾಯ.
*ಪ್ರತಿ ಕ್ಷೇತ್ರದಲ್ಲೂ ಆಸ್ಪತ್ರೆ.
*ಬಿಪಿಎಲ್ ಕಾರ್ಡ್ ದಾರರಿಗೆ ಜೀವವಿಮೆ.
*ಹಿರಿಯ ನಾಗರೀಕರಿಗೆ ಉಚಿತ ಶಸ್ತ್ರ ಚಿಕಿತ್ಸೆ.
*ನಾಯಿ ಕಾಟ ತಡೆಗೆ ವಿಶೇಷ ಕ್ರಮ.
*ಹೊರವಲಯದ ವಾರ್ಡ್ ಗಳಿಗೆ ಕುಡಿಯುವ ನೀರಿನ ಯೋಜನೆ.
*ಜಲಮಂಡಳಿಗೆ ವಿಶೇಷ ಅಧಿಕಾರಿಗಳ ನೇಮಕ.
*ಎಲ್ಲ ಇಲಾಖೆಗಳ ನಡುವೆ ಸಮನ್ವಯ ಘಟಕ.
*ಕೆರೆಗಳ ಒತ್ತುವರಿ ವಿರುದ್ದ ಕಠಿಣ ಕ್ರಮ.
*ಹೆರಿಗೆ ಆಸ್ಪತ್ರೆ ನಿರ್ಮಾಣ.
*ಶೇ.20 ರಷ್ಟು ತೆರಿಗೆ ಕಡಿತ.
*ಬಿಬಿಎಂಪಿಯಲ್ಲಿ ಏಕರೂಪ ಆಡಳಿತ.
*ಅಕ್ರಮ ಸಕ್ರಮ ಯೋಜನೆ ಪರಿಷ್ಕರಣೆ.
*ಭ್ರಷ್ಟಾಚಾರ ರಹಿತ ಟೆಂಡರ್ ಪ್ರಕ್ರಿಯೆಗೆ ಚಾಲನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X