ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಮು ಹಿಂಚಾಸಾರ ಮಸೂದೆಗೆ ವಿರೋಧ

By Mrutyunjaya Kalmat
|
Google Oneindia Kannada News

Muslim body against proposed bill on communal violence
ಲಖನೌ, ಮಾ. 22 : ಕೋಮು ಹಿಂಸಾಚಾರ ತಡೆ ಮಸೂದೆಯನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದೆ. ಇದು ಮುಸ್ಲಿಮರ ವಿರೋಧಿಯಾಗಿರುವ ಈ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಕರಡು ತಿದ್ದುಪಡಿಯಾಗಬೇಕು ಎಂದು ಅಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಒತ್ತಾಯಿಸಿದೆ.

ಇಲ್ಲಿನ ದಾರುಲ್ ಉಲೇಮ್ ಇಸ್ಲಾಮಿಕ್ ವಿವಿಯಲ್ಲಿ ನಡೆದ ತ್ರಿದಿನ ವಾರ್ಷಿಕ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಇದನ್ನು ಘೋಷಿಸಿರುವ ಮಂಡಳಿ ವಕ್ತಾರ ಮೌಲಾನಾ ಅಬ್ದುಲ್ ರಹೀಮ್ ಖುರೇಶಿ, ಕೋಮು ಹಿಂಸಾಚಾರ ಮಸೂದೆ ಸಂಪೂರ್ಣ ಮುಸ್ಲಿಂ ವಿರೋಧಿ ಎಂದು ಆರೋಪಿಸಿದರು. ಇಸ್ರೇಲ್ ಜೊತೆಗೆ ಶಸ್ತ್ರಾಸ್ತ್ರ ಖರೀದಿ ಒಪ್ಪಂದವನ್ನೂ ಮಾಡಿಕೊಂಡಿರುವ ಭಾರತದ ಕ್ರಮಗಳು ಮತ್ತು ಆ ದೇಶದೊಂದಿಗೆ ಮೈತ್ರಿ ಹೆಚ್ಚಿಸುವ ಕ್ರಮಗಳನ್ನು ಮಂಡಳಿ ಆಕ್ಷೇಪಿಸುತ್ತದೆ ಎಂದರು.

ಈಗಿರುವ ರೂಪದಲ್ಲಿ ಈ ಮಸೂದೆಯ ಕೆಲವು ವಿಧಿಗಳಿಗೆ ನಮ್ಮ ಗಂಭೀರ ಆಕ್ಷೇಪವಿದೆ. ಕೋಮು ಹಿಂಸಾಚಾರ ತಡೆ ಕರಡು ಮಸೂದೆಯಲ್ಲಿ ಪೊಲೀಸರಿಗೆ ಮತ್ತು ಮ್ಯಾಜಿಸ್ಟ್ರೇಟರಿಗೆ ಹೆಚ್ಚಿನ ಅಧಿಕಾರ ನೀಡಲಾಗುತ್ತದೆ. ಇದುವರೆಗಿನ ಕೋಮು ಹಿಂಸಾಚಾರ ಘಟನೆಗಳ ಕುರಿತು ವರದಿ ಸಲ್ಲಿಸಿರುವ ಹಲವಾರು ಆಯೋಗಗಳು, ಪೊಲೀಸರು ಮುಸಲ್ಮಾನರ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದೇ ಉಲ್ಲೇಖಿಸಿರುವ ಹಿನ್ನೆಲೆಯಲ್ಲಿ, ನಾವು ಮತ್ತಷ್ಟು ಆತಂಕದಿಂದ ಬಾಳಬೇಕಾಗುತ್ತದೆ. ಈ ಕಾರಣಕ್ಕೆ ನಾವು ಇದರ ತಿದ್ದುಪಡಿಗೆ ಆಗ್ರಹಿಸುತ್ತಿರುವುದಾಗಿ ಮಂಡಳಿಯ ಕಾನೂನು ಸಲಹೆಗಾರ ಜಾಫರಿಯಾಬ್ ಜಿಲಾನಿ ಜಿಲಾನಿ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X