ಎಸ್ಎಸ್ಎಲ್ ಸಿ ವಿದ್ಯಾರ್ಥಿಗಳಿಗಾಗಿ ಸಹಾಯವಾಣಿ
080 - 23312244
080 – 23312245
ಈ ಸಹಾಯವಾಣಿಯು ದಿನಾಂಕ ಮಾರ್ಚ್ 25ರಿಂದ ಮಾರ್ಚ್ 31ರವರೆಗೆ ಪ್ರತಿದಿನ ಮಧ್ಯಾಹ್ನ 3ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ. 24ರಂದು ಮಾತ್ರ ಸಹಾಯವಾಣಿ ಕಾರ್ಯಕ್ರಮವನ್ನು ಬೆಳಿಗ್ಗೆ 11ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಸಲಾಗುವುದು. ಮಾರ್ಚ್ 24ರಂದು ಬೆಳಿಗ್ಗೆ 11 ಗಂಟೆಗೆ ಶಿಕ್ಷಣ ಸಚಿವರು ವಿಶ್ವೇಶ್ವರ ಹೆಗಡೆ ಕಾಗೇರಿ ಸಹಾಯವಾಣಿ ಕಾರ್ಯಕ್ರಮವನ್ನು ಉದ್ಫಾಟಿಸಲಿದ್ದಾರೆ.
ಈ ಸಹಾಯವಾಣಿ ಕಾರ್ಯಕ್ರಮದಲ್ಲಿ ಪರಿಣಿತರಾದ ಮನಶಾಸ್ತ್ರಜ್ಞರು, ವೈದ್ಯರು, ಸಮಾಜಶಾಸ್ತ್ರಜ್ಞರು ಮತ್ತು ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಇವರ ಜೊತೆಯಲ್ಲಿ ಇಲಾಖಾ ಅಧಿಕಾರಿಗಳೂ ಇರುತ್ತಾರೆ. ವಿದ್ಯಾರ್ಥಿಗಳು/ಪೋಷಕರು ಮೇಲೆ ತಿಳಿಸಿರುವ ದೂರವಾಣಿ ಸಂಖ್ಯೆಗೆ ಭಾನುವಾರ ಹಾಗೂ ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ ಉಳಿದ ದಿನಗಳಂದು ಕರೆಮಾಡಿ ತಮ್ಮ ಸಮಸ್ಯೆಗಳಿಗೆ, ಸಂದೇಹಗಳಿಗೆ ಪರಿಹಾರ ಪಡೆದುಕೊಳ್ಳಬಹುದು.
ವಿದ್ಯಾರ್ಥಿಗಳು/ಪೋಷಕರು ಪರೀಕ್ಷೆಗೆ ಸಿದ್ದತೆ ಮಾಡಿಕೊಳ್ಳುವ ವಿಧಾನ, ಪ್ರಶ್ನೆ ಪತ್ರಿಕೆಯ ಮಾದರಿ, ಅಧ್ಯಯನ ಕೌಶಲ್ಯ ಅಳವಡಿಸಿಕೊಳ್ಳುವ ವಿಧಾನ, ಪರೀಕ್ಷಾ ಭೀತಿ, ಸಮಯ ನಿರ್ವಹಣೆ, ಜ್ಞಾಪಕಶಕ್ತಿ ಕಡಿಮೆ ಎಂಬ ಭಾವನೆ/ಮರೆವು/ನೆನಪಿನ ಶಕ್ತಿ ಉಳಿಸಿಕೊಳ್ಳುವ ವಿಧಾನ, ತಂದೆ ತಾಯಿಗಳ/ಸಮಾಜ/ಸ್ನೇಹಿತರ-ಒತ್ತಡ, ಮುಂದಿನ ಶಿಕ್ಷಣದ ಅರಿವು/ವೃತ್ತಿ ಕುರಿತು ಮಾಹಿತಿ ಕುರಿತು ಪ್ರಶ್ನೆಗಳನ್ನು ಕೇಳಬಹುದು.
ವಿದ್ಯಾರ್ಥಿಗಳು ಸಹಾಯವಾಣಿಗೆ ಕರೆ ಮಾಡಿದಾಗ ಪಠ್ಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳನ್ನು ಕೇಳಬಾರದೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ತಿಳಿಸಿದ್ದಾರೆ. ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಏಪ್ರಿಲ್ 1ರಿಂದ ಪ್ರಾರಂಭವಾಗುತ್ತಿದೆ.
ಕರ್ನಾಟಕ ಎಸ್ಎಸ್ಎಲ್‌ಸಿ ಪರೀಕ್ಷೆ ವೇಳಾಪಟ್ಟಿ