ಕೂಡ್ಲಿಗಿ ಶಾಸಕನ ಮನೆ ಮೇಲೆ ಆದಾಯ ತೆರಿಗೆ ದಾಳಿ
ಬಳ್ಳಾರಿ,
ಮಾ. 19 : ಕೂಡ್ಲಿಗಿಯ ಬಿಜೆಪಿ ಶಾಸಕ ಬಿ. ನಾಗೇಂದ್ರ ಅವರ ಬೆಂಗಳೂರು, ಬಳ್ಳಾರಿ ನಿವಾಸಗಳು, ಹೊಸಪೇಟೆಯ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದ್ದಾರೆ. id="toptextpromo">ಬೆಂಗಳೂರಿನ
ರಾಜಾಜಿನಗರದ ಮನೆ, ಅಶೋಕ, ಕಾನಿಷ್ಕ ಹೊಟೇಲ್‌ಗಳ ಆವರಣದಲ್ಲಿಯ ಕಚೇರಿಗಳು, ಹೊಸಪೇಟೆಯಲ್ಲಿನ ಕಚೇರಿ ಮತ್ತು ಬಳ್ಳಾರಿಯ ಬಸವೇಶ್ವರನಗರದಲ್ಲಿಯ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡವು, ಶಾಸಕ ಬಿ. ನಾಗೇಂದ್ರ ಅವರು ಸಲ್ಲಿಸಿರುವ ಆದಾಯದ ಮಾಹಿತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಶಾಸಕ
ಬಿ. ನಾಗೇಂದ್ರ ಅವರು ಬೆಂಗಳೂರಿನಲ್ಲೇ ಇದ್ದಾರೆ. ಹೊಸಪೇಟೆಯ ಅವರ ಕಚೇರಿಗೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ 10 ಅಧಿಕಾರಿಗಳ ತಂಡ, ಬಳ್ಳಾರಿಯ ಅವರ ಮನೆಗೆ 20ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ರಾತ್ರಿ 7.45ರ ಸುಮಾರಿಗೆ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಡೆಸಿತು.











Click it and Unblock the Notifications