ಮಾಜಿ ಪ್ರೇಯಸಿಗೆ ಬೆಂಕಿ ಇಟ್ಟ ಎಂಎಲ್ಎ
ಲಖ್ನೋ,
ಮಾ. 18: ಸಮಾಜವಾದಿ ಶಾಸಕನೊಬ್ಬ, ತನ್ನ ಸೇವೆ ಮಾಡುತ್ತಿದ್ದ ಮಾಜಿ ಪ್ರೇಯಸಿಯ ಮೇಲೆ ಕೋಪಗೊಂಡು, ಬೆಂಕಿ ಹಚ್ಚಿದ ಘಟನೆ ಇಲ್ಲಿನ ಮಹರಗಂಜ್ ಜಿಲ್ಲೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಈ ಘಟನೆಯ ನಂತರ ಶಾಸಕ ಶ್ರೀಪಾಠ್ ಆಜಾದ್ ಧೋಬಿ ನೇಪಾಳಕ್ಕೆ ಓಡಿ ಹೋಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. id="toptextpromo">ಸೋಮವಾರ
ರಾತ್ರಿ ಶಾಸಕನ ಮನೆಯಲ್ಲಿ ಆತನ ಮಾಜಿ ಪ್ರೇಯಸಿ ಸಾವಿತ್ರಿದೇವಿ ಊಟ ಬಡಿಸುತ್ತಿದ್ದಳು. ತಮ್ಮ ನಡುವೆ ಇದ್ದ ಸಂಬಂಧದಲ್ಲಿ ಬಿರುಕು ಮೂಡಿದ ಶಂಕೆ ವ್ಯಕ್ತಪಡಿಸಿದ ಸಾವಿತ್ರಿ ದೇವಿ ಮೇಲೆ ಕೋಪಗೊಂಡ ಶಾಸಕ, ತಟ್ಟೆಯನ್ನು ಎಸೆದು ಆಕೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ, ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಬಗ್ಗೆ ಸಾವಿತ್ರಿ ದೇವಿಯ ಮಗ ಮಹೇಶ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾನೆ. id='are-slot-1' class='oiad oi-axt oiadv'> id='top-searched-articles'>ಈ
ದುರ್ಘಟನೆಯಿಂದ ತೀವ್ರ ಸುಟ್ಟ ಗಾಯಕ್ಕೊಳಗಾದ ಸಾವಿತ್ರಿ ದೇವಿಯನ್ನು ಗೋರಖಪುರದ ಬಾಬಾ ರಾಘವ ದಾಸ್ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದ್ದು, ಆಕೆ ಜೀವನ್ಮರಣ ಹೋರಾಟ ನಡೆಸುತ್ತಿದ್ದಾಳೆ. ಶಾಸಕ ಶ್ರೀಪಾಠ್ ನೇಪಾಳಕ್ಕೆ ಪರಾರಿಯಾಗಿದ್ದಾನೆಂದು ಶಂಕಿಸಲಾಗಿದೆ. ಈ ಬಗ್ಗೆ ದೂರು ಸ್ವೀಕರಿಸಲಾಗಿದ್ದು, ತನಿಖೆ ನಡೆಸುತ್ತಿದ್ದೇವೆ ಎಂದು ಗೋರಖಪುರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.











Click it and Unblock the Notifications