ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಸೂದೆಯಿಂದ ಮುಸ್ಲಿಂರಿಗೆ ಅನ್ಯಾಯ
ಲಖನೌ, ಮಾ.15 : ಮಹಿಳಾ ಮೀಸಲಾತಿ ಮಸೂದೆ ಮುಸ್ಲಿಂ ಜನಾಂಗ ಮತ್ತು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ದುರ್ಬಲಗೊಳಿಸಲು ಕಾಂಗ್ರೆಸ್ ಮತ್ತು ವಿದೇಶಿ ಶಕ್ತಿಗಳು ನಡೆಸುತ್ತಿರುವ ಸಂಚಿನ ಭಾಗವಾಗಿದೆ ಎಂದು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂತಹ ಜನವಿರೋಧಿ ಮಸೂದೆ ವಿರುದ್ಧ ಸಮಾಜವಾದಿ ಪಕ್ಷ ಹೋರಾಟ ಮುಂದುವರೆಸಲಿದೆ ಎಂದರು. ನಮಗೆ ಇದರ ವಿರುದ್ಧ ಮಾಡು ಇಲ್ಲವೇ ಮಡಿ ಹೋರಾಟ ಅಗತ್ಯವಾಗಿದೆ. ಅಂತಿಮವಾಗಿ ಮಹಿಳೆಯರಿಂದಲೇ ತುಂಬಿರುವ ಸಂಸತ್ತು ಹುಟ್ಟುಹಾಕಲು ನಡೆಸುತ್ತಿರುವ ತಂತ್ರದ ಭಾಗವಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಕೂಡಾ ಈ ಮಸೂದೆ ವಿರುದ್ಧ ಇದ್ದಾರೆ ಎನ್ನುವ ಅಂಶ ನಮಗೆ ತಿಳಿದಿದೆ ಎಂದು ಯಾದವ್ ಹೇಳಿದರು.
ಈ ಮಸೂದೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಬಣ್ಣ ಬಯಲು ಮಾಡುತ್ತೇವೆ. ಮುಸ್ಲಿಂ ಜನಾಂಗದ ಬಳಿ ಹೋಗಿ ವಾಸ್ತವಾಂಶದ ಬಗ್ಗೆ ತಿಳುವಳಿಕೆ ನೀಡುತ್ತೇವೆ ಎಂದು ಎಚ್ಚರಿಕೆ ನೀಡಿದ ಲಾಲೂ ಪ್ರಸಾದ್ ಯಾದವ್, ಮುಲಾಯಂ ಬೆಂಬಲ ವ್ಯಕ್ತಪಡಿಸಿದ್ದಾರೆ.