ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಯುಎಸ್ ಸಹಭಾಗಿತ್ವ ಬ್ಲಾಗಿಂಗ್ ಸ್ಪರ್ಧೆ

By Mahesh
|
Google Oneindia Kannada News

The US -India Partnership: It Matters Blog Contest
ಚೆನ್ನೈ, ಮಾ. 14: ಸಾರ್ವಜನಿಕ ತಿಳುವಳಿಕೆ ಹೆಚ್ಚಳ ಹಾಗೂ ಭಾರತ ಅಮೆರಿಕ ಸಂಬಂಧಗಳನ್ನು ಕುರಿತು ಯುವ ಜನಾಂಗವನ್ನು ಉತ್ತೇಜಿಸಲು ಅಮೆರಿಕ ದೂತಾವಾಸವು 'ಭಾರತ-ಅಮೆರಿಕ ಸಭಾಗಿತ್ವ; ಕಾರ್ಯಸಾಧು' ಎಂಬ ವಿಷಯದ ಮೇಲೆ ಬ್ಲಾಗಿಂಗ್ ಸ್ಪರ್ಧೆ ಏರ್ಪಡಿಸಿದೆ. ಈ ಸ್ಪರ್ಧೆಯು ತಮಿಳುನಾಡು, ಪಾಂಡಿಚೇರಿ, ಕರ್ನಾಟಕ ಹಾಗೂ ಕೇರಳ ನಿವಾಸಿಗಳಿಗೆ ಮಾತ್ರ ಎನ್ನಲಾಗಿದೆ.

ಸ್ಪರ್ಧಿಗಳು ಇತ್ತೀಚಿನ ಬೆಳವಣಿಗೆಗಳನ್ನು ಆಧರಿಸಿ ಭಾರತ ಅಮೆರಿಕ ಸಂಬಂಧಗಳ ಬಗ್ಗೆ ತಮ್ಮ ಸ್ವಂತ ಬ್ಲಾಗ್ ಸಿದ್ಧಪಡಿಸಬೇಕು. ಬ್ಲಾಗನ್ನು ಆಕರ್ಷಕವಾಗಿದ್ದು, ಶೈಕ್ಷಣಿ ಹಾಗೂ ರಂಜನೀಯ ಅಂಶಗಲಿಮ್ದ ಕೂಡಿರಬೇಕು. ಸೃಜನಶೀಲತೆ ಹಾಗೂ ತಾಂತ್ರಿಕ ಕೌಶಲ್ಯದ ಆಧಾರ ಮೇಲೆ ಸ್ಪರ್ಧಿಯ ಕಾರ್ಯಕ್ಷಮತೆಯನ್ನು ತಿಳಿಯಲಾಗುವುದು.

ನಿಯಮಗಳು: 18 ವರ್ಷ ಮೇಲ್ಪಟ್ಟ ಭಾರತೀಯರಾಗಿದ್ದು, ತಮಿಳು ನಾಡು, ಕರ್ನಾಟಕ, ಪಾಂಡಿಚೇರಿ ಹಾಗೂ ಕೇರಳ ರಾಜ್ಯಗಳ ನಿವಾಸಿಗಳು ಭಾಗವಹಿಸಬಹುದು. ಸ್ಪರ್ಧೆಗೆಪ್ರವೇಶ ಪಡೆಯಲು ತಮ್ಮ ಹೆಸರು, ವಯಸ್ಸು, ಬ್ಲಾಗ್ ಯುಆರ್ ಎಲ್ ವಿಳಾಸ, ಈ ಮೇಲ್ ವಿಳಾಸ, ಮೇಲಿಂಗ್ ವಿಳಾಸ, ದೂರವಾಣಿ/ ಮೊಬೈಲ್ ಸಂಖ್ಯೆ ಮುಂತಾದ ವೈಯಕ್ತಿಕ ವಿವರಗಳನ್ನು [email protected] ಗೆ ಕಳಿಸಬೇಕು.

ಬಹುಮಾನ ವಿವರ: ಮೊದಲ ಬಹುಮಾನ: ಒಂದು ಲ್ಯಾಪ್ ಟಾಪ್ ಕಂಪ್ಯೂಟರ್, ಎರಡನೇ ಬಹುಮಾನ: ಒಂದು ಡೆಸ್ಕ್ ಟಾಪ್ ಕಂಪ್ಯೂಟರ್, ಮೂರನೇ ಬಹುಮಾನ: ಐಪಾಡ್ . ಪ್ರವೇಶಗಳನ್ನು ಕಳುಹಿಸಲು ಕೊನೆ ದಿನಾಂಕ ಏಪ್ರಿಲ್ 9,2010.

ವಿಜೇತರಿಗೆ ಏಪ್ರಿಲ್ ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಯುಎಸ್ ಕನ್ಸಲ್ ಜನರಲ್ ಎಟಿ ಸಿಮ್ಕಿನ್ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ. ಹೆಚ್ಚಿನ ವಿವರಗಳನ್ನು http://chennai.usconsulate.gov/ ನಿಂದ ಪಡೆಯಬಹುದು ಎಂದು ಅಮೆರಿಕ ಕಾನ್ಸುಲೇಟ್ ಜನರಲ್ ಕಚೇರಿಯ ಪ್ರಭಾರ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕಿಣಿ ಗುಪ್ತಾ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X