ಹಾಕಿ : ಆಸೀಸ್ ಮುಡಿಗೆ ವಿಶ್ವಕಪ್
ನವದೆಹಲಿ,
ಮಾ.14 : ಜರ್ಮನಿಯ ಹ್ಯಾಟ್ರಿಕ್ ಕನಸನ್ನು ಭಗ್ನಗೊಳಿಸಿದ ಆಸ್ಟ್ರೇಲಿಯನ್ನರು ವಿಶ್ವಕಪ್ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. id="toptextpromo">ಮೇಜರ್
ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 2-1 ಗೋಲುಗಳಿಂದ ಜರ್ಮನಿ ತಂಡವನ್ನು ಫರಾಭವಗೊಳಿಸಿ ಪ್ರಶಸ್ತಿ ಎತ್ತಿಹಿಡಿಯಿತು. ಇದರೊಂದಿಗೆ ಆಸ್ಟ್ರೇಲಿಯಾ ತಂಡ 24 ವರ್ಷಗಳ ಬಳಿಕ ಮತ್ತೊಮ್ಮೆ ವಿಶ್ವಕಪ್ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿತು. id='are-slot-1' class='oiad oi-axt oiadv'> id='top-searched-articles'>ಆಸೀಸ್
ತಂಡದ ಪರ ಓಕೆಂಡನ್ 6ನೇ ನಿಮಿಷ ಹಾಗೂ ಲೂಕ್ ಡೊಯೆರ್ನರ್ 56ನೇ ನಿಮಿಷ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಗೋಲುಗಳಿಸಿ ಗೆಲುವಿನಲ್ಲಿ ವಿಜೃಂಭಿಸಿದರು. ಜರ್ಮನಿ ತಂಡಕ್ಕೆ ಮಾರ್ಟಿನ್ ಹ್ಯಾನರ್ ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಏಕೈಕ ಗೋಲು ಗಳಿಸಿಕೊಡುವಲ್ಲಿ ಸಫಲರಾದರು. 1986ರ ವಿಶ್ವಕಪ್ ಹಾಕಿಯಲ್ಲಿ ಇಂಗ್ಲೆಂಡ್ ತಂವನ್ನು ಸೋಲಿಸುವ ಮೂಲಕ ಆಸ್ಟ್ರೇಲಿಯಾ ಮೊದಲ ಬಾರಿಗೆ ಪ್ರಶಸ್ತಿ ಗೆದ್ದುಕೊಂಡಿತ್ತು.











Click it and Unblock the Notifications