ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೂಸುಫ್, ಯೂನಿಸ್ ಗೆ ಆಜೀವ ನಿಷೇಧ

By Mahesh
|
Google Oneindia Kannada News

PCB imposes life ban on Mohd Yousuf, Younis Khan
ಕರಾಚಿ,ಮಾ 10 : ತಂಡದೊಳಗೆ ಆಟಗಾರರ ನಡುವೆ ಆಂತರಿಕ ಕಿತ್ತಾಟ ಮತ್ತು ಹೊಂದಾಣಿಕೆ ಇರದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಂಡದ ಹಿರಿಯ ಆಟಗಾರರಾದ ಮೊಹಮ್ಮದ್ ಯೂಸುಫ್ ಮತ್ತು ಯುನಿಸ್ ಖಾನ್ ಅವರಿಗೆ ಆಜೀವ ನಿಷೇಧ ಹೇರಿದೆ ಅಲ್ಲದೇ ಇತರ ಆಟಗಾರರಿಗೂ ದಂಡ ಮತ್ತು ಒಂದು ವರ್ಷಗಳ ನಿಷೇಧ ಹೇರಿದೆ.

ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸದಲ್ಲಿ ತಂಡದ ಕಳಪೆ ಪ್ರದರ್ಶನ ಹಿಂದಿನ ಕಾರಣ ತಿಳಿಯಲು ಪಾಕ್ ಕ್ರಿಕೆಟ್ ಮಂಡಳಿ ವಾಸಿಂ ಬಾರಿ ನೇತೃತ್ವದ ಸಮಿತಿಯೊಂದನ್ನು ನೇಮಿಸಿತ್ತು. ಸಮಿತಿ ನೀಡಿದ ವರದಿ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಕ್ ಕ್ರಿಕೆಟ್ ಮಂಡಳಿ ತೆಗೆದುಕೊಂಡ ಕಠಿಣ ಕ್ರಮಗಳು ಇಂತಿವೆ:

* ಮೊಹಮ್ಮದ್ ಯೂಸುಫ್ ಮತ್ತು ಯೂನಿಸ್ ಖಾನ್ ಅವರಿಗೆ ಆಜೀವ ನಿಷೇಧ.
* ಶೋಹೆಬ್ ಮಲ್ಲಿಕ್ ಮತ್ತು ರಾಣಾ ನವೀದ್ ಮೇಲೆ ಒಂದು ವರ್ಷದ ನಿಷೇಧ ಮತ್ತು 20 ಲಕ್ಷ ರೂಪಾಯಿ ದಂಡ.
*ಆಸ್ಟ್ರೇಲಿಯಾ ಪ್ರವಾಸದ ವೇಳೆ ಚೆಂಡು ವಿರೂಪಗೊಳಿಸಿದ್ದಕ್ಕಾಗಿ ಸಹೀದ್ ಆಫ್ರಿದಿಗೆ 30ಲಕ್ಷ ರೂಪಾಯಿ ದಂಡ
*ಭವಿಷ್ಯದಲ್ಲಿ ಸಭ್ಯವಾಗಿ ವರ್ತಿಸುವಂತೆ ಆಫ್ರಿದಿ ಮತ್ತು ಅಕ್ಮಲ್ ಸಹೋದರರಿಗೆ ಅಂತಿಮ ಎಚ್ಚರಿಕೆ.
*ಕಮ್ರಾನ್ ಅಕ್ಮಲ್ ಗೆ ಮೂರು ಮಿಲಿಯನ್ ಮತ್ತು ಅವರ ಸಹೋದರ ಉಮರ್ ಅಕ್ಮಲ್ ಗೆ 20 ಲಕ್ಷ ರೂಪಾಯಿ ದಂಡ.

ಇಂಜಿ ಖಂಡನೆ: ಪಾಕ್ ತಂಡ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರು ಆಟಗಾರರ ನಿಷೇಧದ ಕುರಿತು ಪ್ರತಿಕ್ರಿಯಿಸಿದ್ದು, ಪಿಸಿಬಿ ನಿರ್ಣಯವನ್ನು ಖಂಡಿಸಿದ್ದಾರೆ. ಯೂಸುಫ್ ಹಾಗೂ ಯೂನಿಸ್ ಕೋರ್ಟ್ ಮೊರೆ ಹೋಗುವುದು ಒಳ್ಳೆಯದು. ಮಲ್ಲಿಕ್ , ರಾಣಾ ನವೀದ್ ನಿಷೇಧ ಹೇರಿಕೆಯಿಂದ ಯುವ ಆಟಗಾರರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X