ಶಂಕರ್ :ಸಂಗೀತ, ಕಾವ್ಯ, ಸಂವಾದ ಸಂವೇದನೆ

ಕಲೆ, ಕಾವ್ಯ, ಸಂಸ್ಕೃತಿ, ರಂಗಭೂಮಿ, ಜಾನಪದ, ಮುಂತಾದ ಕ್ಷೇತ್ರಗಳಲ್ಲಿ ಸಾಧನೆಯನ್ನು ಮಾಡಿದಂತಹ ವ್ಯಕ್ತಿಗಳೊಂದಿಗೆ ಸಂವಾದದ ಮೂಲಕ ನಮ್ಮಲ್ಲಿನ ಸಂವೇದನಾಶೀಲತೆಯನ್ನು ವೃದ್ಧಿಪಡಿಸುವುದೇ ಈ ವೇದಿಕೆಯ ಉದ್ದೇಶ ಹಾಗೂ ಆಶಯ. ಈ ವೇದಿಕೆಯಲ್ಲಿ ಈಗಾಗಲೇ ಪ್ರಖ್ಯಾತ ಕವಿ, ಸಾಹಿತಿಗಳಾದ ಡಾ.ಎಚ್. ಎಸ್. ವೆಂಕಟೇಶಮೂರ್ತಿ,ಚಲನಚಿತ್ರ ಕಲಾವಿದರಾದ ಪ್ರೊ ಜಿ ಕೆ ಗೋವಿಂದ ರಾವ್ ಹಾಗು ಪ್ರಖ್ಯಾತ ಸುಗಮ ಸಂಗೀತ ಗಾಯಕರು ಹಾಗೂ ಸಂಗೀತ ನಿರ್ದೇಶಕರಾದ ದಿII ಸಿ ಅಶ್ವಥ್ ಅವರುಗಳು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ಧಾರೆ. ಈ ಬಗೆಯ ಸಂವಾದದ ಕಾರ್ಯಕ್ರಮಗಳನ್ನು ತಿಂಗಳಿಗೊಂದರಂತೆ ಯೋಜಿಸುವುದು "ಸಂವೇದನ"ದ ಉದ್ದೇಶವಾಗಿದೆ ಎನ್ನುತ್ತಾರೆ ಸಂಸ್ಥೆಯ ಸಕ್ರಿಯ ಸದಸ್ಯ ಪೂರ್ಣಪ್ರಜ್ಞ..
"ಸಂವೇದನ"ದ ಈ ತಿಂಗಳ ಕಾರ್ಯಕ್ರಮವಾದ ಶಂಕರ್ ಶಾನುಭೋಗರೊಡನೆ " ಕಾವ್ಯ ಸಂಗೀತ" ಸಂವಾದದ ವಿವರಗಳು ಇಂತಿವೆ:
ದಿನಾಂಕ: 14 ಮಾರ್ಚ್ 2010, ಭಾನುವಾರ
ಸ್ಥಳ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬೀ ಪೀ ವಾಡಿಯಾ ರಸ್ತೆ, ಬಸವನಗುಡಿ
ವೇಳೆ: ಬೆಳಗ್ಗೆ 10.30 ರಿಂದ 12 ಗಂಟೆಯವರೆಗೆ
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:
ಪೂರ್ಣಪ್ರಜ್ಞ : 98450 44486
ಸಂದೀಪ್ : 98455 95760
ಬೃoದ : 98861 67041
ಚಂದ್ರಿಕಾ : 98453 33980
ಶಂಕರ ಶಾನುಭೋಗ್ :- ಕಿರು ಪರಿಚಯ
ಶಂಕರ ಶಾನುಭೋಗರು ತಮ್ಮ ಸುಶ್ರಾವ್ಯ ಹಾಗು ಸುಮಧುರ ಸಂಗೀತದಿಂದ ಮನೆಮಾತಾಗಿದ್ದಾರೆ. ಸಂಗೀತಾಸಕ್ತ ಕುಟುಂಬದಲ್ಲಿ ಜನಿಸಿದ ಶ್ರೀಯುತರು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತವನ್ನು ಪಂ. ಮಹಾಬಲೇಶ್ವರ ಭಾಗವತರು, ಗುರು ಮಾಧವ ಭಟ್ಟರು, ಪಂ. ರಾಮರಾವ್ ನಾಯಕರು, ಹಾಗು ಪಂ. ರಾಜಬುವ ಸೊಂಟಕ್ಕೆಯವರುಗಳ ಬಳಿ ಅಧ್ಯಯನ ನಡೆಸಿರುತ್ತಾರೆ. ಆಗ್ರಾ ಮತ್ತು ಗ್ವಾಲಿಯರ್ ಘರಾನಗಳಲ್ಲಿ ಪ್ರೌಡಿಮೆ ಸಾಧಿಸಿರುವ ಶ್ರೀಯುತರು ಪ್ರಸ್ತುತ ಪ್ರಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಗಾಯಕರಾದ ಪಂ. ಪರಮೇಶ್ವರ ಹೆಗ್ಗಡೆ ಅವರಲ್ಲಿ ಮಾರ್ಗದರ್ಶನ ಪಡೆಯುತಿದ್ದಾರೆ.
ಅಮೆರಿಕ, ಕೆನಡಾ, ಯು ಕೆ, ಮುಂತಾದ ದೇಶಗಳಲ್ಲಿ ತಮ್ಮ ಸುಮಧುರ ಸಂಗೀತದಿಂದ ಕಲಾಭಿಮಾನಿಗಳನ್ನು ರಂಜಿಸಿದ್ದಾರೆ. ಚಲನಚಿತ್ರಗಳಲ್ಲಿ ಹಿನ್ನಲೆಗಾಯನ, ಭಾವಗೀತೆ ಮಾತ್ರವಲ್ಲದೆ ರಾಷ್ಟ್ರೀಯ ಕ್ರೀಡಾ ಕೂಟ, ಏರೋ ಇಂಡಿಯಾ ಶೋ ಹಾಗು ಹಲವಾರು ನೃತ್ಯ - ಸಂಗೀತ ಕಾರ್ಯಕ್ರಮಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
ಶ್ರೀ ಶಾನುಭೋಗರು ಸಂಗೀತದ ಶಕ್ತಿಯಿಂದ ಮಾನವೀಯ ಗುಣಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕ್ರಿಯಶೀಲರಾಗಿದ್ದಾರೆ. ಆಧ್ಯಾತ್ಮಿಕ ಉನ್ನತಿಯನ್ನು ಪಡೆಯಲು ಸಂಗೀತವು ಒಂದು ಸಾಧನವೆಂದು ನಂಬಿರುವ ಶ್ರೀಯುತರು "ಕಾವ್ಯ ಸಂಗೀತ" ವೆಂಬ ಹೊಸ ಪ್ರಯೋಗವನ್ನು ಯಶಸ್ವಿಯಾಗಿ ಮಾಡುತ್ತಿದ್ದಾರೆ.











Click it and Unblock the Notifications