ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗದ್ದಲದ ನಡುವೆ ಮಹಿಳಾ ವಿಧೇಯಕ ಮಂಡನೆ
ನವದೆಹಲಿ, ಮಾ. 8: ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಕೇಂದ್ರ ಕಾನೂನು ಸಚಿವ ಎಂ ವೀರಪ್ಪ ಮೊಯ್ಲಿ ಅವರು ಮಹಿಳಾ ಮೀಸಲಾತಿ ವಿಧೇಯಕವನ್ನು ಲೋಕಸಭೆಯಲ್ಲಿಹಾಗೂ ರಾಜ್ಯಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಖಾತೆ ಸಚಿವೆ ಶ್ರೀಮತಿ ಕೃಷ್ಣ್ ಸಮರ್ಥ್ ಮಂಡಿಸಿದರು.
ಪ್ರತಿಪಕ್ಷಗಳಾದ ಗದ್ದಲದಿಂದ ಸದನವನ್ನು ಇಂದು ಎರಡೆರೆಡು ಬಾರಿ ಮುಂದೂಡಲಾಯಿತು. ಸಮಾಜವಾದಿ ಪಕ್ಷ, ಆರ್ ಜೆಡಿ ಹಾಗೂ ಬಿಎಸ್ ಪಿಯ ಸದಸ್ಯರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು. ಸಭಾಪತಿ ಹಮೀದ್ ಅನ್ಸಾರಿ ಅವರೆಡೆಗೆ ತೆರಳಿ ವಿಧೇಯಕದ ಪ್ರತಿಗಳನ್ನು ಕಿತ್ತುಕೊಳ್ಳಲು ಯತ್ನಿಸಿದರು. ತಮ್ಮ ಬಳಿ ಇದ್ದ ಪ್ರತಿಗಳನ್ನು ಹರಿದು ಗಾಳಿಗೆ ತೂರಿ, ಕೂಗಾಟ ನಡೆಸಿದರು.
ಮಹಿಳಾ ಮೀಸಲಾತಿ ವಿಧೇಯಕದ ಪರ ವಿರೋಧದ ಮತದಾನ ಸಂಜೆ 6ಕ್ಕೆ ನಡೆಯುವ ಸಾಧ್ಯತೆಗಳಿವೆ. ಸದನದಲ್ಲಿ ಗೊಂದಲಮಯ ಸನ್ನಿವೇಶ ಏರ್ಪಟ್ಟಿರುವುದರಿಂದ ವಿಧೇಯಕ ಕುರಿತು ಚರ್ಚೆ ನಡೆಯುವ ಸಾಧ್ಯತೆಗಳು ಕಮ್ಮಿ ಎನ್ನಲಾಗಿದೆ.
ಆರ್ ಜೆಡಿ, ಎಪ್ ಪಿ ಖಂಡನೆ: ಮಹಿಳಾ ವಿಧೇಯಕ ಮಂಡನೆಯಿಂದ ಎದ್ದಿರುವ ಗೊಂದಲ ನಿವಾರಣೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸರ್ವ ಪಕ್ಷಗಳ ಸಭೆಯನ್ನು ಕರೆದಿದ್ದಾರೆ. ಸರ್ಕಾರಕ್ಕೆ ನೀಡಿರುವ ಬೆಂಬಲ ವಾಪಾಸ್ ಪಡೆಯುವ ಬಗ್ಗೆ ಲಾಲೂ ಸುಳಿವು ನೀಡಿದ್ದಾರೆ.