ತೈಲ ಬೆಲೆ ಏರಿಕೆಗೆ ಸೋನಿಯಾ ಬೆಂಬಲ
ನವದೆಹಲಿ,
ಮಾ. 4 : ತೈಲ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಯುಪಿಎ ಸರಕಾರದ ಅಂಗಪಕ್ಷಗಳಲ್ಲಿ ನಡೆದಿರುವ ಮುಸುಕಿನ ಗುದ್ದಾಟದ ಬೆನ್ನಲ್ಲೇ ಕೇಂದ್ರ ಬಜೆಟ್ ಬೆಂಬಲಿಸುವ ಮೂಲಕ ತೈಲ ದರ ಇಳಿಕೆ ಸಾಧ್ಯವಿಲ್ಲ ಎನ್ನುವುದನ್ನು ಪರೋಕ್ಷವಾಗಿ ಯುಪಿಎ ಚೇರಮನ್ ಹಾಗೂ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ. id="toptextpromo"> ಕಾಂಗ್ರೆಸ್ ಸಂಸದೀಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಭಾಷಣದುದ್ದಕ್ಕೂ ಕೇಂದ್ರ ಬಜೆಟ್ ನ್ನು ಪ್ರಶಂಸಿದ್ದಾರೆ. ಹಣಕಾಸು ಸಚಿವ ಪ್ರಣಬ್ ಮುಖರ್ಜಿ ಮಂಡಿಸಿ ಬಜೆಟ್ ನ್ನು ಜನಪರ ಬಜೆಟ್ ಆಗಿದ್ದು, ಎಲ್ಲಾ ವಲಯಕ್ಕೆ ನ್ಯಾಯ ಒದಗಿಸುವ ಬಜೆಟ್ ಇದಾಗಿದೆ ಎಂದು ಹೇಳಿದ್ದಾರೆ. ತಮ್ಮ ಮಾತಿನುದ್ದಕ್ಕೂ ಎಲ್ಲಿಯೂ ತೈಲ ಬೆಲೆಗಳ ಬಗ್ಗೆ ಪ್ರಸ್ತಾಪಿಸದ ಸೋನಿಯಾ, ಒಟ್ಟಾರೆಯಾಗಿ ಬಜೆಟ್ ಉತ್ತಮವಾಗಿದೆ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'> ಲೋಕಸಭೆಯಲ್ಲಿ ಪ್ರತಿಪಕ್ಷಗಳು ಅಗತ್ಯ ವಸ್ತುಗಳು ಬೆಲೆ ಏರಿಕೆ ಕುರಿತಂತೆ ಆರೋಪಿಸುತ್ತಿವೆ. ಈ ಸರಕಾರ ಸೂಕ್ತ ಕ್ರಮಕೈಗೊಳ್ಳಲಿದೆ ಎಂದು ಸೋನಿಯಾ ಗಾಂಧಿ ಹೇಳಿದರು.











Click it and Unblock the Notifications