ರ‌್ಯಾಗಿಂಗ್ ಪಿಡುಗಿಗೆ ಮತ್ತೋರ್ವ ಬಲಿ
ಜೈಪುರ್,
ಮಾ. 3 : ಹಿರಿಯ ವಿದ್ಯಾರ್ಥಿಗಳಿಂದ ಸತತ ಒಂದು ತಿಂಗಳು ಕಾಲ ರ‌್ಯಾಗಿಂಗ್ ಯಾತನೆ ಅನುಭವಿಸಿದ ವಿದ್ಯಾರ್ಥಿಯೊಬ್ಬ ಚಲಿಸುತ್ತಿರುವ ರೈಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ತಾನದ ಜಲ್ವಾರ್ ಜಿಲ್ಲೆಯ ಗಂದಾರ್ ಪ್ರದೇಶದ ವ್ಯಾಪ್ತಿಯಲ್ಲಿ ಮಂಗಳವಾರ ಜರುಗಿದೆ. id="toptextpromo">ಸತ್ಯೇಂದ್ರಕುಮಾರ್(20)
ಮೃತಪಟ್ಟ ದುರ್ದೈವಿ. ಮುಂಬೈನ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಸತ್ಯೇಂದ್ರಕುಮಾರ್ ಕಾಲೇಜಿನ ಆಡಳಿತಕ್ಕೆ ಒಳಪಟ್ಟಿರುವ ಹಾಸ್ಟೆಲ್ ನಲ್ಲಿ ವಾಸವಾಗಿದ್ದ. ಕಳೆದ ಒಂದು ತಿಂಗಳಿಂದ ಆತನ ಹಿರಿಯ ಸಹಪಾಠಿಗಳು ನಿತ್ಯ ರ‌್ಯಾಗಿಂಗ್ ಮಾಡುತ್ತಿದ್ದರಿಂದ ಬೇಸತ್ತು ರಾಜಸ್ತಾನದ ಜಲ್ವಾರ್ ಜಿಲ್ಲೆಯ ಗಂದಾರ್ ಪ್ರದೇಶದಲ್ಲಿ ರೈಲು ಸಂಚರಿಸುತ್ತಿದ್ದಾಗ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸತ್ಯೇಂದ್ರ ಮೂಲತಃ ಹರಿಯಾಣದ ಕುರುಕ್ಷೇತ್ರದವನು ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಸತ್ಯೇಂದ್ರ
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮುನ್ನ ನನ್ನ ಸಾವಿಗೆ ಏಳು ಜನ ಹಿರಿಯ ಸಹಪಾಠಿಗಳು ಕಾರಣ ಎಂದು ಪತ್ರ ಬರೆದಿಟ್ಟಿದ್ದಾನೆ. ಆರೋಪಿ ವಿದ್ಯಾರ್ಥಿಗಳ ಬಂಧನಕ್ಕೆ ಮುಂಬೈ ಪೊಲೀಸರು ಆರಂಭಿಸಿದ್ದಾರೆ. ಕಾಲೇಜಿನ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಮಹಾರಾಷ್ಟ್ರ ಸರಕಾರ ಹೇಳಿದೆ.











Click it and Unblock the Notifications